Belagavi

ಜನತಾ ಕರ್ಪ್ಯೂ: ಆಟಕ್ಕುಂಟು ಲೆಕ್ಕಕ್ಕಿಲ್ಲ


ಬೆಳಗಾವಿ : ಜನತಾ ಕರ್ಫೂ ಹಿನ್ನೆಲೆ ಸರ್ಕಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ನೀಯಮಗಳೊಂದಿಗೆ ಜನರ ಅತ್ಯಗತ್ಯ ವಸ್ತುಗಳ ಖರಿದಿಗೆ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಅವಕಾಶ ನೀಡಿದೆ. ಬೆಳಗಾವಿ ನಗರದಲ್ಲಿ ಸರ್ಕಾರದ ನೀಯಮಗಳೆಲ್ಲ ಲೆಕ್ಕಕ್ಕಿಲ್ಲದೆ ಜನ ದಟ್ಟಣೆ ಅಧಿಕವಾಗಿದೆ.

ರಾಜ್ಯದಲ್ಲಿ ಕೊರೊನಾ 2ನೇ ಅಲೆ ತೀವ್ರ ಗತಿ ಪಡೆಯುತ್ತಿದ್ದು  ಸೊಂಕಿತರು ಮತ್ತು ಸಾವಿನ ಸಂಖ್ಯೆ ದಿನೆದಿನೆ ಹೆಚ್ಚುತ್ತಿದೆ. ನಗರದಲ್ಲೂ ದಿನಗಳು ಕಳೆದಂತೆ ಸೊಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ.

ಅಗತ್ಯ ವಸ್ತುಗಳ ಖರೀದಿಗೆ ಮಾರಿಕಟ್ಟೆಯಲ್ಲಿ ಜನ ಮುಗಿಬಿಳುತ್ತಿದ್ದಾರೆ‌.  ವಸ್ತುಗಳ ಖರೀದಿಸುವ ಭರದಲ್ಲಿ ಜನರು ಸಾಮಾಜಿಕ ಅಂತರವನ್ನೆ ಮರೆತಿದ್ದಾರೆ. ಅಂಗಡಿಗಳ ಮುಂಗಟ್ಟಿನಲ್ಲಿ ಜನ ದಟ್ಟನೆ ಹೆಚ್ಚಾಗಿದೆ ಮತ್ತು ಬಿದಿಬದಿ ವ್ಯಾಪಾರಿಗಳ ಬಳಿ ಜನ ಸಾಮಾಜಿಕ ಅಂತರ ಲೆಕ್ಕಿಸದೆ ಮುಗಿಬಿದ್ದಿದ್ದಾರೆ. ಸರ್ಕಾರ ಜನತಾ ಕರ್ಫೂಗಿಂತ ಮೊದಲು ವಾರಾಂತ್ಯದ ಏರಡು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿತ್ತು ಆದರೆ ಜನತಾ ಕರ್ಫೂ ಮದ್ಯ ವಾರಾಂತ್ಯ ಲಾಕ್ ಡೌನ್ ಜಾರಿ ಕುರಿತು ಜನರಿಗೆ ಸ್ಪಷ್ಟ ಮಾಹಿತಿಯಿಲ್ಲ.

ಮಹಾನಗರಪಾಲಿಕೆ ಮತ್ತು  ಪೊಲೀಸ್ ಇಲಾಖೆ ವ್ಯವಸ್ಥಿತ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಬಿಗಿ ಭದ್ರತೆ ಜಾರಿ ನೆಪದಲ್ಲಿ ಜನರಿಗೆ ಲಾಟಿ ಏಟು ನೀಡುವುದರ ಹೊರತು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಸ್ಕ್ ಹಾಕದವರ ಬಳಿ ದಂಡ ವಸೂಲಿ ಕಾರ್ಯವನ್ನು ಬಿಟ್ಟು ಮಾರುಕಟ್ಟೆಯಲ್ಲಿ ಜನ ದಟ್ಟಣೆಯನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಿಲ್ಲ.

ರಾಜ್ಯ ಸರ್ಕಾರ ಕೊರೊನಾ ಮಾಹಾಮಾರಿ ನಿಯಂತ್ರಣಕ್ಕೆ ಜಾರೊಗೊಳಿಸಿರುವ ಜನತಾ ಕರ್ಫ್ಯೂ ಬೆಳಗಾವಿ ನಗರದಲ್ಲಿ ವಿಫಲವಾಗುತ್ತಿದ್ದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮ ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗದೆ. ಬಡ ಜನರ ಜೀವನ ಕಷ್ಟಕ್ಕೆ ಸಿಲುಕಿಸುತ್ತಿದೆ.


Leave a Reply