BelagaviState

ಡಿಕೆಶಿ, ಎಚ್ಡಿಕೆ ಅಣುಕು ಶವಯಾತ್ರೆ ಮಾಡಿದ ಕತ್ತಿ ಅಭಿಮಾನಿಗಳು


ಹುಕ್ಕೇರಿ: ಸಚಿವ ಉಮೇಶ್ ಕತ್ತಿ ಅಭಿಮಾನಿಗಳು ಇಂದು ಡಿಕೆಶಿ ಹಾಗೂ ಹೆಚ್. ಡಿ. ಕುಮಾರ್ ಸ್ವಾಮಿ ಅವರ ಅನುಣು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಕ್ಕಿ ಕೇಳಿದ ರೈತನಿಗೆ ಸತ್ತು ಹೋಗು ಎಂದು ಹೇಳಿಕೆ ನೀಡಿದ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತ ವಾಗಿತ್ತು. ಈ ಹೇಳಿಕೆಯನ್ನ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹಾಗೂ ಎಚ್ ಡಿ ಕುಮಾರಸ್ವಾಮಿ ಉಮೇಶ್ ಕತ್ತಿ ವಿರುದ್ಧ ಚಟ್ಟ ಕಟ್ಟುತ್ತೇವೆ ಎಂದಿದ್ರು.

ಇದಕ್ಕೆ ಕತ್ತಿ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಉಮೇಶ ಕತ್ತಿ ಅಭಿಮಾನಿಗಳು ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಪ್ರತಿಕೃತಿಗಳ ಅಣುಕು ಶವಯಾತ್ರೆ ಜೊತೆಗೆ ಅಂತ್ಯ ಸಂಸ್ಕಾರ ಮಾಡಿ ಸಚಿವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಾಗಿರಿ ಇರುವುದು ಕನಕಪುರದಲ್ಲಿ,ಹುಕ್ಕೇರಿಯಲ್ಲಿ ಅಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.


Leave a Reply