Bengaluru

ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ಸಡಿಲಿಕೆ


ಬೆಂಗಳೂರು: ವಾಹನ ತೆರಿಗೆ ಪಾವತಿಸುವವರಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದಾರೆ.ಕೊರೊನಾ ಹೆಮ್ಮಾರಿ ಜೋರಾಗಿದ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನ ಸಡಿಲಗೊಳಿಸಲಾಗಿದೆ.ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ವಾಹನ ತೆರಿಗೆ ಪಾವತಿಸುವ ಅವಧಿ ವಿಸ್ತರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಏಪ್ರಿಲ್ 15, 2021ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಏಪ್ರಿಲ್ 30, 2021ರವರೆಗೆ ವಿಸ್ತರಿಸಿಸಲಾಗಿದೆ. ಮೇ 15, 2021 ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ: ಮೇ 31, 2021 ರವರೆಗೆ ಅವಧಿಯನ್ನು ವಿಸ್ತರಿಸಿ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಆದೇಶ ಮಾಡಿದ್ದಾರೆ.


Leave a Reply