Belagavi

ಸಿಡಿಲು ಬಡಿದು ಸ್ಥಳದಲ್ಲೆ ಇಬ್ಬರ ಸಾವು


ಸವದತ್ತಿ : ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ತಾಲೂಕಿನ ಹಂಚಿನಾಳದ ಗ್ರಾಮದ ಹೊಲವರಿ ನಡೆದಿದೆ.

ಯರಗಟ್ಟಿ ತಾಲೂಕಿನ ಕೊಡ್ಲಿವಾಡದ ನಿವಾಸಿ ಹನುಮಂತ ಕರೆಪ್ಪಾ ಕಾರಬಾರಿ (16) . ಮಾಡಮಗೇರಿ ನಿವಾಸಿ ಹೊನ್ನಪ್ಪ ಶಿವಪ್ಪ ಮಬನೂರ (19) ಸಿಡಿಲಿಗೆ ಬಲಿಯಾದ ದುರ್ದೈವಿಗಳು.

ಕುರಿ ಮೇಯಿಸಲು ಹಂಚಿನಾಳಕ್ಕೆ ಬಂದಿದ್ದರು.
ಶನಿವಾರ (ಇಂದು) ಸಂಜೆ ವೇಳೆಯಲ್ಲಿ ಬಾರಿ ಪ್ರಮಾಣದ ಗಾಳಿ, ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಮೃತರ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿದೆ.

ತೀವ್ರ ಶೋಕ ವ್ಯಕ್ತಪಡಿಸಿದ‌ ಆನಂದ ಮಾಮಾನಿ.

ಈ ಘಟನೆ ಕುರಿತು ಶೋಕ ವ್ಯಕ್ತಪಡಿಸಿದ ಆನಂದ ಮಾಮನಿ, ಕೂಡಲೇ ಮೃತರ ಕುಟುಂಬಕ್ಕೆ ತಲಾ 5ಲಕ್ಷ ₹ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
(ವರದಿ ಈರಣ್ಣಾ ಹುಲ್ಲೂರ)


Leave a Reply