BelagaviState

ಬೆಳಗಾವಿಯಲ್ಲಿ ಬಿಜೆಪಿ ದಾಪುಗಾಲು


ಬೆಳಗಾವಿ: ಲೋಕಸಭಾ ಉಪ ಚುನಾವಣೆ ಮತ ಎಣಿಕೆಯ 20ನೇ ಸುತ್ತಿನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಮಂಗಳ ಅಂಗಡಿ 3446 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಲೋಕಸಭಾ ಉಪಚುನಾವಣಾ ಮತ ಎಣಿಕೆಯಲ್ಲಿ ಭಾರಿ ಪೈಪೋಟಿ ನಡೆದಿದ್ದು ಬಿಜೆಪಿ ಮುನ್ನಡೆಯಾಗಿದೆ. ಬಿಜೆಪಿಯು 50 ಸಾವಿರ ಮತಗಳ ಗಡಿ ದಾಟಿದ್ದು ಮ, ಕಾಂಗ್ರೆಸ್ ಕೂಡ ಸ್ವಲ್ಪ ಮತಗಳ ಅಂತರದಲ್ಲಿ ಹಿನ್ನಡೆ ಸಾಧಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರಾರಂಭದಲ್ಲಿ ಮೊದಮೊದಲಿಗೆ ಮುನ್ನಡೆಯಲ್ಲಿದ್ದರು. ಆದರೆ ಇದೀಗ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮುಂಚೂಣಿಯಲ್ಲಿದ್ದಾರೆ.


Leave a Reply