BelagaviState

ಕೈ, ಕಮಲದ ಅಬ್ಬರಕ್ಕೆ ನೆಲಕಚ್ಚಿದ ಎಂಇಎಸ್


ಬೆಳಗಾವಿ: ಲೋಕಸಭಾ ಉಪಚುನಾವಣೆಯಲ್ಲಿ ಕಮಲ ಮತ್ತು ಕಾಂಗ್ರೆಸ್ ಅಬ್ಬರಕ್ಕೆ ಎಂಇಎಸ್ ನೆಲಕಚ್ಚಿದ್ದು, ಎಲ್ಲ ವಿಷಯಗಳಲ್ಲೂ ಮುಖ ತುರಿಸುತ್ತಿದ್ದ ಎಂಇಎಸ್ ಈ ಉಪಚುನಾವಣೆಯಲ್ಲಿಯೂ ಕೈಹಾಕಿ ಮುಖ ಸುಟ್ಟುಕೊಂಡಿದೆ.

ಗಡಿಜಿಲ್ಲೆಯಾದ ಬೆಳಗಾವಿಯಲ್ಲಿ ಒಂದಲ್ಲಾ ಒಂದು ಖ್ಯಾತೆ ತೆಗೆಯುವ ಎಂಇಎಸ್ ಲೋಕಸಭಾ ಉಪಚುನಾವಣೆಯಲ್ಲು ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿತ್ತು. ಶಿವಸೇನೆಯಿಂದ ಶುಭಂ ಸೆಳ್ಕೆಯನ್ನು ಕಣಕ್ಕಿಳಿಸುವುದರ ಮೂಲಕ ಗೆಲವು ನಮ್ಮದೆ ಎಂದು ಕೊಚ್ಚಿಕೊಂಡಿತ್ತು. ಆದರೆ. ಕಮಲ ಮತ್ತು ಕಾಂಗ್ರೆಸ್ ಅಬ್ಬರಕ್ಕೆ ಎಂಇಎಸ್ ಕೊಚ್ಚಿಹೋಗಿದೆ. ಇಲ್ಲಿಯವರೆಗೂ ಶುಭಂ ಸೆಳಕೆ ಕೇವಲ 29,310 ಮತಗಳನ್ನು ಪಡೆದಿದ್ದು ಮೂರನೆ ಸ್ಥಾನದಲ್ಲಿ ಮುನ್ನಡೆಯುತ್ತಿದ್ದು ಗೆಲವು ಕನಸಿನ ಮಾತಾಗಿದೆ.

ಇನ್ನು ಬೆಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಗೆಲುವಿನತ್ತ ಹೆಜ್ಜೆಹಾಕುತ್ತಿದ್ದು 1,16,395 ಮತಗಳಿಂದ ಮುನ್ನಡೆಯುತ್ತಿದ್ದು ಗೆಲುವಿನ ನಗೆ ಬೀರಲು ಸಿದ್ದರಾಗಿದ್ದು, ಅನುಕಂಪದ ಅಲೆ ಕೆಲಸ ಮಾಡಿದೆ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಇಲ್ಲಿಯವರೆಗೂ 1,05,225 ಮತಗಳನ್ನು ಪಡೆದು ಹಿನ್ನೆಡೆಯಲ್ಲಿದ್ದಾರೆ ಆದರೂ ಬಿಜೆಪಿಗೆ ಬಿರುಸಿನ ಪೈಪೋಟಿ ನೀಡುತ್ತಿದ್ದಾರೆ. ಸಹೋದರರ ಸಾಮ್ರಾಜ್ಯವಾದ ಗೋಕಾಕದಲ್ಲಿಯೇ ಕಡಿಮೆ ಮತಗಳಿಂದ ಹಿನ್ನಡೆಯಾಗಿದೆ.

ಒಟ್ಟಿನಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆ ಕೈ ಮತ್ತು ಕಮಲ ಎರಡೂ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಎರಡೂ ಪಕ್ಷಗಳ ಪೈಪೊಟಿಯಲ್ಲಿ ಎಂಇಎಸ್ ಮಾಯವಾಗುವ ಲಕ್ಷಣಗಳು ಸಧ್ಯದ ಪರಿಸ್ಥಿತಿಗೆ ಎದ್ದು ಕಾಣುತ್ತಿದೆ.


Leave a Reply