BelagaviState

ಕುಂದಾನಗರಿಯಲ್ಲಿ ಅರಳಿದ ಕಮಲ


ಬೆಳಗಾವಿ : ಕೊನೆಯ ಕ್ಷಣದವರೆಗೂ ಬಹು ರೋಚಕತೆ ಮೂಡಿಸುವುದರ ಮೂಡಿಸಿದ  ಬೆಳಗಾವಿ ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ. ಸುರೇಶ್ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸೋಲುಂಡಿದ್ದಾರೆ. ಆರಂಭದಿಂದಲೂ ಕ್ಲೈಮಾಕ್ಸ್ ಹಂತದವರೆಗೂ ಹಾವು ಏಣಿಯಂತಿದ್ದ ಮತ ಗಳಿಕೆ, ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಲೇ ಇತ್ತು. ಅಂತಿಮವಾಗಿ ಮಂಗಲಾ 2912 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ ಕೊನೇ ಸುತ್ತಿನ ಮತ ಎಣಿಕೆವರೆಗೂ ಭಾರಿ ಕುತೂಹಲ ಮೂಡಿಸಿತ್ತು. 10 ಸಾವಿರ ಮತಗಳ ಲೀಡ್ನಲ್ಲಿದ್ದ ಸತೀಶ್, 76ನೇ ಸುತ್ತಿನಲ್ಲಿ 1628 ಮತಗಳ ಅಂತರಕ್ಕೆ ಇಳಿದದ್ದು, ಕಾಂಗ್ರೆಸ್ನಲ್ಲಿ ಎದೆಬಡಿತ ಹೆಚ್ಚಿಸಿತ್ತು. ಹೀಗೆ ಮುಂದುವರಿದ ರೋಚಕ ಕ್ಲೈಮಾಕ್ಸ್ನಲ್ಲಿ ತೀವ್ರ ಪೈಪೋಟಿ ಕೊಟ್ಟ ಮಂಗಲಾ ಅಂಗಡಿ, 80ನೇ 3101 ಮತಗಳ ಮುನ್ನಡೆ ಪಡೆಯುವ ಮೂಲಕ ಸತೀಶ್ರನ್ನ ಹಿಂದಿಕ್ಕಿದರು. ಇಬ್ಬರೂ ಪಡೆದ ಮತಗಳ ನಡುವಿನ ಅಂತರ ಕಡಿಮೆ ಇದ್ದಿದ್ದರಿಂದ ಕೊನೇ ಸುತ್ತಿನ ಮತ ಎಣಿಕೆ ವರೆಗೂ ಭಾರಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮಂಗಲಾ 4,35,202 ಮತಗಳನ್ನು ಪಡೆದು ಜಯಭೇರಿ ಭಾರಿಸಿದರು. ಸತೀಶ್ ಜಾರಕಿಹೊಳಿ 4,32,299 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು. ಪ್ರತಿಷ್ಠಿತ ಅಖಾಡವಾಗಿದ್ದ ಬೆಳಗಾವಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗೆಲುವಿಗಾಗಿ ತೀವ್ರ ಜಿದ್ದಾಜಿದ್ದಿ ನಡೆದಿತ್ತು. ಮಂಗಲಾ ಅಂಗಡಿ ಅವರನ್ನು ಕಣಕ್ಕಿಳಿಸಿದ ಬಿಜೆಪಿ, ಅನುಕಂಪದ ಮತಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


Leave a Reply