BelagaviBengaluruState

ಬಿಜೆಪಿಗೆ ಮಂಗಳದಾಯಕ ಫಲಿತಾಂಶ: ಡಿಸಿಎಂ ಸವದಿ ಹರ್ಷ


ಬೆಳಗಾವಿ: ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶ್ರೀಮತಿ ಮಂಗಳ ಅಂಗಡಿಯವರು ಜಯಭೇರಿ ಭಾರಿಸುವದರೊಂದಿಗೆ ಫಲಿತಾಂಶವು ಬಿಜೆಪಿಯ ಪಾಲಿಗೆ ಮಂಗಳದಾಯಕವಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

ಅತ್ಯಂತ ಪ್ರತಿಷ್ಠೆಯ ಈ ಚುನಾವಣೆಯಲ್ಲಿ, ಬಿಜೆಪಿ ಜಯ ಸಾಧಿಸುವುದರೊಂದಿಗೆ ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಜಿ ಮತ್ತು ರಾಜ್ಯದಲ್ಲಿ ಶ್ರೀ ಯಡಿಯೂರಪ್ಪಜಿ ಅವರ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸನ್ನು ಗೆದ್ದಿದೆ ಎಂಬುದು ಸಾಬೀತಾಗಿದೆ.

ಬೆಳಗಾವಿಯ ಮತದಾರ ಪ್ರಭುಗಳು ಶ್ರೀಮತಿ ಮಂಗಳ ಅವರನ್ನು ಗೆಲ್ಲಿಸುವದರೊಂದಿಗೆ ಅವರ ಪತಿ ದಿವಂಗತ ಶ್ರೀ ಸುರೇಶ್ ಅಂಗಡಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗಿದೆ.

ಸಹೋದರಿ ಮಂಗಳ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅವರಿಂದ ಮುಂದೆ ಉತ್ತಮ ಸಾಧನೆಗಳು ಹೊರಹೊಮ್ಮಲಿ ಎಂದು ನಾನು ಶುಭ ಹಾರೈಸುತ್ತೇನೆ.

ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಇನ್ನಿಲ್ಲದ ತಂತ್ರಗಳನ್ನು ನಡೆಸಿದರೂ ಸಹ ಬಿಜೆಪಿಯ ಒಗ್ಗಟ್ಟಿನ ಮತ್ತು ಸಂಘಟನೆಯ ಬಲದಿಂದ ವಿಜಯ ಸಾಧ್ಯವಾಗಿದೆ.

ಈ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರಿಗೆ ಮತ್ತು ಈ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ನನ್ನ ಹಾರ್ದಿಕ ವಂದನೆಗಳು ಎಂದು ಅಭಿನಂದಿಸಿದ್ದಾರೆ


Leave a Reply