Uncategorized

RCU ವಿದ್ಯಾರ್ಥಿಗಳ ಆಕ್ರೋಶ: ಪರೀಕ್ಷೆ ಮುಗಿಯದೆ ಮುಂದಿನ ತರಗತಿ ಪ್ರಾರಂಭಕ್ಕೆ ಸಿದ್ದತೆ


ಬೆಳಗಾವಿ: ಕೊರೊನಾ ಹೆಮ್ಮಾರಿ ಹಿನ್ನಲೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳೇ ಇನ್ನೂ ಮುಂದೂಡಲಾಗಿದೆ. ಆದ್ರೆ ಆಡಳಿತ ಮಂಡಳಿ  ಅಷ್ಟರಲ್ಲೇ ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್ಲೈನ್ ಮೂಲಕ ನಡೆಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಂದಾಗಿದೆ.

RCU  ನಡೆಗೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ 14ದಿನಗಳ ಜನತಾ ಕರ್ಫ್ಯೂ ಹಿನ್ನೆಲೆ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೆ ಈ ಪರೀಕ್ಷೆಗಳು ನಡೆಯುತ್ತವೆಯೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಮುಗಿದಿಲ್ಲ ಆಗಲೇ  ಆನ್ ಲೈನ್ ತರಗತಿ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿದ್ಯಾರ್ಥಿಗಳ ಪ್ರಶ್ನಿಸಿದ್ದಾರೆ. ಪರೀಕ್ಷೆ ಮುಂದಿಟ್ಟುಕೊಂಡು ಆನ್ಲೈನ್ ತರಗತಿಗೆ ಹಾಜರಾದರೆ ಕಲಿಕೆ ಪರಿಣಾಮಕಾರಿಯಾಗದು. ಹೀಗಾಗಿ ಪರೀಕ್ಷೆ ಕುರಿತು ವಿಶ್ವ ವಿದ್ಯಾಲಯ ಆಡಳಿತ ಮಂಡಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗೊಂದಲಕ್ಕೊಳಗಾಗಿರುವ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.


Leave a Reply