Belagavi

ಯುವತಿಗೆ ವಂಚನೆ:  ಆರೋಪಿ ಸೆರೆ


ಮೂಡಲಗಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂಡಲಗಿ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಯುವಕನನ್ನು ಬಂಧಿಸಿದ್ದಾರೆ.

ಇಲ್ಲಿನ ಈರಣ್ಣ ನಗರ(ಕೆಎಬಿ)ದ ಸುನೀಲ ಪ್ರಕಾಶ ಬಾಗೇವಾಡಿ ಎಂಬಾತ ಬಂಧಿತ ಆರೋಪಿ. ಈತ ಪಟ್ಟಣದ ಗಂಗಾ (ಹೆಸರು ಬದಲಾವಣೆ) ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಹುಡುಗಿಯನ್ನು ಒತ್ತಾಯದಿಂದ ಬೆಳಗಾವಿಗೆ ಕರೆದ್ದೊಯ್ದು  ಅಲ್ಲಿ ಮನೆ ಮಾಡಿಕೊಂಡು ವಿವಾಹವಾಗದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದು ನಂತರ ಆಕೆ ಮದುವೆ ವಿಚಾರ ತೆಗೆದಾಗ ಆಕೆಗೆ ಹಿಂಸೆ ನೀಡಿರುವುದಲ್ಲದೇ ಆಕೆಯನ್ನು ಅಲ್ಲಿಯೇ ಬಿಟ್ಟು ಬಂದಿದ್ದಾನೆ ಎಂದು ನೊಂದ ಯುವತಿಯು ಮೂಡಲಗಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಆರೋಪಿ ವಿರುದ್ದ ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Leave a Reply