BengalurukaranatakaState

ರಾಜ್ಯದಲ್ಲಿ ರೆಮಿಡಿಸಿವರ್ ಔಷಧಿಗೂ ಕೊರತೆ, ಸಿಎಂ ತುರ್ತು ಸಭೆ


ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥತಿ ಕೈಮೀರುತ್ತಿದೆ. ಬೆಡ್ ಇಲ್ಲ, ಕ್ಸಿಜೆನ್ ಇಲ್ಲ ಎಂಬ ದ್ವನಿಯೊಂದಿಗೆ ಇದೀಗ ರೆಮಿಡಿಸಿವರ್​ ಔಷಧಿ ಇಲ್ಲ ಎಂಬ ಕೂಗು ರಾಜ್ಯದಲ್ಲಿ ಕೇಳುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ ಈಗಾಗಲೇ ಚಾಮರಾಜನಗರದಲ್ಲಿ 23, ಕಲಬುರಗಿಯಲ್ಲಿ 4 ಹಾಗೂ ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈಗ ಆಮ್ಲಜನಕದೊಂದಿಗೆ ರೆಮಿಡಿಸಿವರ್​ ಔಷಧಿ ಕೊರತೆಯೂ ಉಂಟಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಸಂಪುಟ ಸಭೆಗೂ ಮುನ್ನ ಮತ್ತೊಂದು ಸಭೆಯನ್ನ ನಡೆಸಲು ನಿರ್ಧರಿಸಿದ್ದಾರೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿಯಲ್ಲಿ ಕೇಳಿ ಬರ್ತಿದ್ದ ಆಕ್ಸಿಜನ್​ ಹಾಗೂ ರೆಮಿಡಿಸಿವರ್​ ಕೊರತೆಯ ಪರಿಸ್ಥಿತಿ ಇದೀಗ ರಾಜ್ಯದಲ್ಲೂ ಉಂಟಾಗಿದೆ.  ಈ ಸಂಕಷ್ಟದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಸಂಪುಟ ಸಭೆಗೂ ಮುನ್ನ ಮತ್ತೊಂದು ಸಭೆಯನ್ನ ನಡೆಸಲು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯದಲ್ಲಿ ರೆಮಿಡಿಸಿವರ್​ ವಿತರಣೆ ಕುರಿತಂತೆ ಸಿಎಂ ಔಷಧಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ 1 ಗಂಟೆಗೆ ಕಾವೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ರೆಮಿಡಿಸಿವರ್ ಪೂರೈಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.


Leave a Reply