Ballary

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜೆನ್ ಇದೆ, ಆಕ್ಸಿಜೆನ್ ಬೆಡ್ ಗಳ ಕೊರತೆ ಇದೆ: ಡಾ.ವಿನಯ ದಾಸ್ತಿಕೊಪ್ಪ ಕಳವಳ


ಬೆಳಗಾವಿ: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರತೆ ಇಲ್ಲ ಆದರೆ ಆಕ್ಸಿಜೆನ್ ಬೆಡ್ ಗಳ ಕೊರತೆ ಇದೆ. ಸೋಂಕಿತರ ಸಂಖ್ಯೆ ಹೀಗೆ ಹೆಚ್ಚುತ್ತ ಸಾಗಿದರೆ ಜಿಲ್ಲೆಯಲ್ಲಿಯೂ ಸಮಸ್ಯೆ ತಲೆದೂರಬಹುದು ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಗಡಿಜಿಲ್ಲೆಯಾದ ಬೆಳಗಾವಿಯಲ್ಲೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ, ಲಾಕ್‍ಡೌನ್ ಸಡಿಲಿಕೆ ವೇಳೆಯಲ್ಲಿ  ಜನದಟ್ಟಣೆ ಹೆಚ್ಚಾಗುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಹೊರಗಡೆ ಸುತ್ತಾಡುವಾಗ ಜಾಗೃತಿ ವಹಿಸಿ ಎಂದು ಹೇಳಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬೇಸರ ಸ್ಯಕ್ತಪಡಿಸಿದ್ದಾರೆ.
ಇನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆಯೂ ನೀಡಲಾಗುತ್ತದೆ. ಇನ್ನು ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ ಬೇಕಾದಷ್ಟು ಆಕ್ಸಿಜೆನ್ ಇದೆ ಆದರೆ, ಆಕ್ಸಿಜನ್ ಬೆಡ್‍ಗಳ ಕೊರತೆ ಇದೆ. ಭಿಮ್ಸ್ ನಲ್ಲಿ ಕೇವಲ 300 ಬೆಡ್‍ಗಳಿಗೆ ಮಾತ್ರ ಆಕ್ಸಿಜನ್ ಸೌಲಭ್ಯ ಇದೆ ಎಂದು ತಿಳಿಸಿದ್ದಾರೆ.

 


Leave a Reply