Belagavi

ಬೆಳಗಾವಿಯಲ್ಲೂ ಆಕ್ಸಿಜೆನ್ ಕೊರತೆಯಿಂದ 3 ಜನ ಸೋಂಕಿತರ ಸಾವು


ಬೆಳಗಾವಿ : ರಾಜ್ಯದಲ್ಲಿ ಆಮ್ಲಜನಕದ ಕೊರತೆ ಮಿತಿಮೀರಿದೆ. ಸೂಕ್ತ ಸಮಯದಲ್ಲಿ ಪ್ರಾಣವಾಯು ಸಿಗದೇ ಅನೇಕರು ಜೀವ ತೆತ್ತಿದ್ದಾರೆ.ಚಾಮರಾಜನಗರ ಹಾಗೂ ಕಲಬರುಗಿಯ ಘಟನೆಗಳು ಇನ್ನೂ ಜೀವಂತವಾಗಿರುವ ಬೆನ್ನಲ್ಲೇ ಬೆಳಗಾವಿಯಲ್ಲೂ ಇಂತದ್ದೇ ದಾರುಣ ಘಟನೆ ವರದಿಯಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದ ಕಾರಣ ಆಂಬುಲೆನ್ಸ್ನಲ್ಲೇ ಮೂವರು ಸಾವನ್ನಪ್ಪಿದ್ದಾರೆ.ಈ ಬಗ್ಗೆ  ಬೆಳಗಾವಿಯಲ್ಲಿ ಆಂಬುಲೆನ್ಸ್ ಜಿಲ್ಲೆಯ ಕರಾಳತೆಯನ್ನ ಬಿಚ್ಚಿಟ್ಟಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಬೆಡ್ ಸಿಗುತ್ತಿದೆ. ದುಡ್ಡಿಲ್ಲದವರು ಆಕ್ಸಿಜನ್ ಸಿಗದೇ ಆಂಬುಲೆನ್ಸ್ನಲ್ಲೇ ಸಾಯುತ್ತಿದ್ದಾರೆ. ನಾನು ಜಿಲ್ಲಾಸ್ಪತ್ರೆ ಎದುರು ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.


Leave a Reply