bidar

ಸೋಂಕಿತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:  ಶಾಸಕ ರಾಜಶೇಖರ ಬಿ.ಪಾಟೀಲ ಕಟ್ಟುನಿಟ್ಟಿನ ಆದೇಶ


ಬೀದರ್: ಸರ್ಕಾರ ಕಲ್ಪಿಸಿರುವ ಸೌಲಭ್ಯ ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಕಲ್ಪಿಸುವ ಮೂಲಕ ಯಾರೊಬ್ಬರಿಗೂ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಮಾಜಿ ಸಚಿವರೂ ಆದ ಹಾಲಿ ಶಾಸಕ ರಾಜಶೇಖರ ಬಿ.ಪಾಟೀಲ ವೈದ್ಯರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಜಿಲ್ಲೆಯ ಹುಮನಾಬಾದ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಧಿಡೀರ ಭೇಟಿ ನೀಡಿ ಆಕ್ಸಿಜನ್ ಇತ್ಯಾದಿ ಕೊರತೆ ಕಾರಣ ಹುಮನಾಬಾದ್ ಆಸ್ಪತ್ರೆಯಲ್ಲಿ ಚಾಮರಾಜಪೇಟೆ ಆಸ್ಪತ್ರೆಯಲ್ಲಿ ನಡೆದ ದುರಂತ ನಡೆಯಬಾರದು. ನಡೆದರೇ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಮಸ್ಯೆ ವಿಕೋಪಕ್ಕೆ ಹೋಗುವ ಮುನ್ನ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಕಲ್ಬುರ್ಗಿ ಬೀದರ ಎಲ್ಲಿಂದಲೇ ಬಂದರೂ ವೈದ್ಯರು ವಿಶೇಷವಾಗಿ ಕೋವಿಡ್ ನೋಡಲ್ ಅಧಿಕಾರಿ ಡಾ.ಗೋವಿಂದ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ ಸೇರಿದಂತೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಸಮರ್ಪಕವಾಗಿ ಚಿಕಿತ್ಸೆ ನೀಡಲು ಮತ್ತು ಕಾಯಿಲೆ ಹರಡದಂತೆ ನೋಡಿಕೊಳ್ಳಲು ಶಕ್ತಿಮೀರಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ಕಲ್ಬುರ್ಗಿಯಲ್ಲಿ ಆಕ್ಸಿಜನ್ ಮತ್ತು ವ್ಯಾಕ್ಸಿನ್ ಕಳ್ಳ ಸಾಗಣೆ ಆಗುತ್ತಿರುವ ಬರುತ್ತಿರುವ ದೂರಿನ ಬಗ್ಗೆ ತಾವೇನು ಹೇಳುತ್ತಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ – ಇಂಥ ಸಂದೀಗ್ದ ಪರಿಸ್ಥಿತಿಯಲ್ಲಿ ಅಂಥ ದುಷ್ಕೃತ್ಯಕ್ಕೆ ಕೈಹಾಕಿದ ವ್ಯಕ್ತಿ ಯಾರಾದರೂ ಸರಿ ದೇವ್ರು ಅವರಿಗೆ ಒಳ್ಳೆದು ಮಾಡೊದಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಅಂಥ ಪ್ರಕರಣಗಳು ನಡೆದ ಬಗ್ಗೆ ಸಾಕ್ಷಿ ಸಮೇತ ದೂರು ಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಶಾಸಕ ರಾಜಶೇಖರ ಬಿ.ಪಾಟೀಲ ಪ್ರತಿಕ್ರಿಯಿಸಿದರು.
ತಹಶೀಲ್ದಾರ್ ಜಯಶ್ರಿ, ಹಳ್ಳಿಖೇಡ(ಬಿ) ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥ, ಹುಮನಾಬಾದ್ ಪುರಸಭೆ ಸದಸ್ಯ ಅಬ್ದುಲ್ ರೆಹೆಮಾನ್ ಗೋರೇಮಿಯ್ಯ, ಸಿಎಂಒ ಡಾ.ನಾಗನಾಥ ಹುಲ್ಸೂರೆ ಮತ್ತಿತರರು ಇದ್ದರು.


Leave a Reply