Belagavikaranataka

ಎಂ ಬಿ ಮಾವರಕರ ನಿಧನಕ್ಕೆ ಬೆಳಗಾವಿ ಪತ್ರಿಕೆಗಳ ಶ್ರದ್ಧಾಂಜಲಿ


ಬೆಳಗಾವಿ ; ಇತ್ತೀಚೆಗೆ ನಿಧನರಾದ ಸಂಪಾದಕ ಎಂ ಬಿ ಮಾವರಕರ ಅವರು ಸಾಮಾಜಿಕವಾಗಿ ಹುಟ್ಟು ಹೋರಾಟಗಾರರು, ಸಂಪಾದಕರ ಸಂಘದ ಉಪಾಧ್ಯಕ್ಷರಾಗಿ ಸಕ್ರಿಯ ಕಾರ್ಯ ನಿರ್ವಹಿಸಿದವರು. ಡೋಹರ ಕಕ್ಕಯ್ಯ ಸಮಾಜದ ಮೂಲಕ ಸಂಘಟನೆಯಲ್ಲಿ ತೊಡಗಿಕೊಂಡು ತಮ್ಮನ್ನು ಗುರುತಿಸಿಕೊಂಡವರು. ಅವರ ನಿಧನ ಪತ್ರಿಕಾರಂಗಕ್ಕೆ ಹಾಗೂ ಸಾಮಾಜಿಕ ರಂಗಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಬೆಳಗಾವಿ ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಶೋಕ ವ್ಯಕ್ತಪಡಿಸಿದರು.

ಅವರು ಇಂದು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆವರಣದಲ್ಲಿ ಎಂ. ಬಿ. ಮಾವರಕರ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಾ ಅವರ ಕಾರ್ಯಗಳನ್ನು ಮೆಲಕು ಹಾಕಿದರು. ಎರಡು ಪತ್ರಿಕೆಗಳ ಮೂಲಕ ಸಮಾಜಮುಖಿ ಕೆಲಸ ಮಾಡಿದ್ದರು ಎಂದರು.

ಇದೇ ವೇಳೆ ಎರಡು ನಿಮಿಷ ಮೌನ ಆಚರಿಸಿ ಅಗಲಿದ ಮಾವರಕರ ಅವರ ಸಾಧನೆ ಕುರಿತು ಸಂಪಾದಕರುಗಳು ಅವಲೋಕನ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೈಫಿಯತ ಸಂಪಾದಕ ರಾಜೇಂದ್ರ ಪೋವಾರ ಮಾತನಾಡಿ ಆಧುನಿಕ ನಾವೀನ್ಯ ತಂತ್ರಜ್ಞಾನವನ್ನು ಮಾಧ್ಯಮದಲ್ಲಿ ಅಳವಡಿಸಿಕೊಂಡು ಪತ್ರಿಕೆಯನ್ನು ಮುನ್ನಡೆಸುತ್ತಿದ್ದ ಮಾವರಕರ ಚಿಂತನೆಗಳು ದೂರದೃಷ್ಟಿಯದ್ದಾಗಿದ್ದವು ಎಂದರು.

ನಾಡೋಜದ ಸಂಪಾದಕರಾದ ಸಲೀಮ ಧಾರವಾಡಕರ, ಸಿರಿನಾಡು ಸಂಪಾದಕ ಸುರೇಶ ಟೋಪಣ್ಣವರ, ಹಸಿರು ಕ್ರಾಂತಿಯ ಸಂಪತ್ ಕುಮಾರ್ ಮುಚಳಂಬಿ, ಜನಜೀವಾಳದ ಎಸ್.ಜೆ. ಏಳುಕೋಟಿ, ರಣಝು೦ಝಾರ್  ದಿನಪತ್ರಿಕೆಯ ಮನೋಜ್ ಕಾಲಕುಂದ್ರಿಕರ, ವಾರ್ತಾ ದಿನಪತ್ರಿಕೆಯ ಸುಹಾಸ್ , ಹಳ್ಳಿಯ ಸಂದೇಶದ ಕುಂತಿನಾಥ ಕಲಮನಿ ಹಾಗೂ ಅನೇಕ ಪತ್ರಿಕೆಗಳ ಸಂಪಾದಕರು ಆಗಮಿಸಿ ಕಂಬನಿ ಮಿಡಿದರು.


Leave a Reply