Belagavi

ಕೋವಿಡ್ – ೧೯ ಸಾಂಕ್ರಾಮಿಕ ರೋಗ ಹಿನ್ನೆಲೆ ಆಕ್ಸಿಜನ್ ಪೂರೈಕೆ ಕುರಿತು ನಿಗಾ ವಹಿಸಲು ಮೇಲುಸ್ತುವಾರಿ ಅಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್


ಬೆಳಗಾವಿ, ಮೇ.೦೪: ಕೋವಿಡ್-೧೯ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆಕ್ಸಿಜನ್ ಕೊರತೆ ಇರುವ ರೋಗಿಗಳಿಗೆ ಶೀಘ್ರವಾಗಿ ಆಕ್ಷಿಜನ್ ಪೂರೈಸಲು ಜಿಲ್ಲಾಡಳಿತದ ವತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ :
ಆಕ್ಷಿಜನ್ ತಯಾರಕರು ಮತ್ತು ಸರಬರಾಜುದಾರರಿಗೆ (ಏಜನ್ಸಿಸ್) ನಿಗದಿತ (ಕ್ಯಾಂಪ ಆಫೀಸರ್) ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನೇಮಕಗೊಂಡ ಅಧಿಕಾರಿಗಳು ಪ್ರತಿದಿನ ಏಜನ್ಸಿಸ್ ಗೆ ಭೇಟಿ ನೀಡಿ, ಏಜನ್ಸಿಯಲ್ಲಿ ಒಟ್ಟು ಪೂರೈಕೆಯಾದ ಆಕ್ಷಿಜನ್ ವಿವರವನ್ನು ಪ್ರತಿ ದಿನ ಅಪರ ಜಿಲ್ಲಾಧಿಕಾರಿ ಹಾಗೂ (ಔxಥಿgeಟಿ ಓoಜಚಿಟ ಔಜಿಜಿiಛಿeಡಿ) ಆಮ್ಲಜನಕ ನೋಡಲ್ ಅಧಿಕಾರಿಯಾಗಿರುವ ಯೋಗೇಶ್ವರ್ ಎಸ್. ಅವರಿಗೆ ಸಲ್ಲಿಸಬೇಕು.
ಏಜೆನ್ಸಿ/ ಸಂಸ್ಥೆಗಳಿಗೆ ಮೇಲುಸ್ತುವಾರಿ ಅಧಿಕಾರಿಗಳ ನೇಮಕ :
ಕಾಕತಿ ಪ್ರದೇಶದಲ್ಲಿರುವ ಬೆಳಗಾವಿ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ಗೆ ಮೇಲುಸ್ತುವಾರಿ ಅಧಿಕಾರಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಎ.ಜೆ.ಬಾಳಿಗಟ್ಟಿ ಅವರನ್ನು ನೇಮಿಸಲಾಗಿದೆ.
ಹಳೆಯ ಪುಣೆ- ಬೆಂಗಳೂರು ರಸ್ತೆಯ ಬಳಿ ಇರುವ ವೆಂಕಟೇಶ ಎಂಟರ್ಪ್ರೈಸಸ್ ಗೆ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಕೆ.ಎಲ್.ಶ್ರೀನಿವಾಸ್ ಅವರನ್ನು ಕ್ಯಾಂಪ ಆಫೀಸರ್ ನ್ನಾಗಿ ನೇಮಿಸಲಾಗಿದೆ.
ಹೊನಗಾದಲ್ಲಿರುವ ಎಮ್.ಎಸ್.ಪಿ.ಎಲ್.ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವಳವಟ್ಟಿ ಅವರನ್ನು ಮೇಲುಸ್ತುವಾರಿ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಅದೇ ರೀತಿ, ಉದ್ಯಮಬಾಗದಲ್ಲಿರುವ ಸುಯಶ್ ಇಂಜಿನಿಯರಿAಗ್ ಕಂಪನಿಗೆ ಜವಳಿ ಇಲಾಖೆ ಉಪ ನಿರ್ದೇಶಕರಾದ ವಾಸುದೇವ ದೊಡಮನಿ ಅವರನ್ನು ಕ್ಯಾಂಪ ಆಫೀಸರ್ ನ್ನಾಗಿ ನೇಮಿಸಲಾಗಿದೆ.
ಮಚ್ಚೆಯಲ್ಲಿರುವ ಕೊಲ್ಹಾಪುರ ಆಕ್ಸಿಜನ್ ಕಂಪನಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಎಸ್.ಎಸ್. ಬಡಿಗೇರ ಅವರನ್ನು ಮೇಲುಸ್ತುವಾರಿ ಅಧಿಕಾರಿಯಾಗಿ ನೇಮಿಸಲಾಗಿದೆ.
ನಿಪ್ಪಾಣಿಯಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳಾದ ಬ್ರಹ್ಮನಾಥ ಗ್ಯಾಸ್ ಏಜೆನ್ಸಿಗೆ ಚಿಕ್ಕೋಡಿಯ ಪ.ರಾಂ.ಇA. ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಹೊನ್ನಾವರ ಹಾಗೂ ಮಹಾ ಆಕ್ಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಜಿಲ್ಲಾ ಪರಿಸರ ಅಧಿಕಾರಿಗಳಾದ ಜಗದೀಶ ಅವರನ್ನು ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗೋಕಾಕ್ ದಲ್ಲಿರುವ ಚೇತನ್ ಗ್ಯಾಸ್ ಏಜನ್ಸಿಗೆ ಗೋಕಾಕ್ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭೀಮಪ್ಪ ಲಾಳಿ ಅವರನ್ನು ಮೇಲುಸ್ತುವಾರಿ ಅಧಿಕಾರಿಯಾಗಿ ನೇಮಿಸಲಾಗಿದೆ.
ಅದೇ ರೀತಿ, ಅಥಣಿಯಲ್ಲಿರುವ ಸಮ್ರೀನ್ ಇಂಡಸ್ಟ್ರಿಯಲ್ ಗ್ಯಾಸ್ ಏಜನ್ಸಿಗೆ ಅಥಣಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ದಯಾನಂದ ಹಿರೇಮಠ ಹಾಗೂ ಎಸ್.ಎಸ್.ಇಂಡಸ್ಟ್ರಿಯಲ್ ಆಕ್ಸಿಜನ್ ಗೆ ಅಥಣಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಜಯಶ್ರೀ ಹಿರೇಮಠ ಅವರನ್ನು ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಸಂಕೇಶ್ವರದಲ್ಲಿರುವ ಮಲ್ಲಿಕಾರ್ಜುನ ಪಾರ್ಮಾ.ಗೆ ಹುಕ್ಕೇರಿ ಪಂ.ರಾ.ಇA.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಎ.ಬಿ.ಪಟ್ಟಣಶೆಟ್ಟಿ ಅವರನ್ನು ಕ್ಯಾಂಪ ಆಫೀಸರ್‌ನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಏಜನ್ಸಿ ಹಾಗೂ ಕ್ಯಾಂಪ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಕಾಲಕಾಲಕ್ಕೆ ಸಲಹೆ ಹಾಗೂ ಸಹಕಾರ ನೀಡುವಂತೆ ಭೂದಾಖಲೆಗಳ ಜಂಟಿ ನಿರ್ದೇಶಕರಾಗಿರುವ ನಿಸ್ಸಾರ ಅಹ್ಮದ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಲೋಪವೆಸಗಿದರೆ ಕಾನೂನು ಕ್ರಮ:
ಕಾರ್ಯದಲ್ಲಿ ಲೋಪವೆಸಗಿದಂತಹ ಏಜನ್ಸಿಯ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಕಲಂ ೫೮ ರಿಂದ ೬೦ ರಂತೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳಾದ ಡಾ.ಕೆ.ಹರೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.


Leave a Reply