karanataka

ಅಗ್ನಿಶಾಮಕ ವಾಹನದ ಮೂಲಕ ಹೈಡ್ರೋ ಫ್ಲೋರೈಡ್ ಸಿಂಪಡಣೆ


ಹುಬ್ಬಳ್ಳಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ಧಾರವಾಡ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಹಯೋಗದೊಂದಿಗೆ ಹುಬ್ಬಳ್ಳಿಯ ಪ್ರಮುಖ ನಗರದಲ್ಲಿ ವೈರಸ್ ಹರಡದಂತೆ ಸೋಡಿಯಂ ಹೈಡ್ರೋ ಫ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಯಿತು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕಾರವಾರ ರಸ್ತೆ ಸೇರಿದಂತೆ ಅವಳಿನಗರದ ಆಯಕಟ್ಟಿನ ಪ್ರದೇಶದಲ್ಲಿ ಅಗ್ನಿಶಾಮಕ ವಾಹನಗಳ ಮೂಲಕ ಸೋಡಿಯಂ ಹೈಡ್ರೋ ಫ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಯಿತು. ಇನ್ನೂ ವೈರಸ್ ತೀವ್ರವಾಗಿ ಹರಡುತ್ತಿದ್ದು, ಜಿಲ್ಲಾಡಳಿತ ತಡವಾಗಿ ಎಚ್ಚೇತ್ತುಕೊಂಡಿದೆ.
ಇನ್ನೂ ಗ್ರಾಮೀಣ ಭಾಗದಲ್ಲಿ ಹಾಗೂ ಅವಳಿನಗರದ ಎಲ್ಲ ಪ್ರದೇಶಗಳಿಗೂ ಕೂಡ ದ್ರಾವಣ ಸಿಂಪಡಣೆ ಮಾಡುವ ಮೂಲಕ ವೈರಸ್ ನಿಯಂತ್ರಣ ಮಾಡಬೇಕಿದೆ.

Leave a Reply