Gadag

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು : ಪೋನ್-ಇನ್-ನೇರ ಕಾರ್ಯಕ್ರಮ


ಗದಗ  .4: ಲಾಕ್ ಡೌನ್ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡು ತಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳದಂತೆ ಹಾಗೂ ಅಧ್ಯಯನದ ನಿರಂತರತೆಯನ್ನು ಕಾಪಾಡಿಕೊಳ್ಳಲು ಮಕ್ಕಳಿಗೆ, ಪಾಲಕರಿಗೆ ಹಾಗೂ ಶಾಲಾ ಶಿಕ್ಷಕರಿಗೆ  ಅಗತ್ಯ ಮಾರ್ಗದರ್ಶನ ನೀಡುವುದಕ್ಕಾಗಿ ಮೇ.7ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ  ಭಾಷಾ ವಿಷಯಗಳಲ್ಲಿ ಮತ್ತು ಕೋರ್ ವಿಷಯಗಳಲ್ಲಿ ಪೋನ್-ಇನ್-ನೇರ ಕಾರ್ಯಕ್ರಮ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಅಧ್ಯಯನದ ಕುರಿತು ಸಮಸ್ಯೆ  ಇದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ಕನ್ನಡ-9448805679, ಇಂಗ್ಲೀಷ್-7829197064, ಹಿಂದಿ-9449116427, ಗಣಿತ-9480752778, ವಿಜ್ಞಾನ-9980397841, ಸಮಾಜ ವಿಜ್ಞಾನ-9901918531 ದೂರವಾಣಿಗಳಿಗೆ  ಸಂಪರ್ಕಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply