Gadag

ಗದಗ ಜಿಲ್ಲಾ ವಕೀಲರ ಸಂಘದಿAದ ಜನಜಾಗೃತಿ : ಅಜಾಗರೂಕತೆಯಿಂದ ವರ್ತಿಸಿ ಅಪಾಯ ತಂದುಕೊಳ್ಳಬೇಡಿ- ಎಮ್.ಎ.ಮೌಲ್ವಿ


ಗದಗ : ಕೋವಿಡ್-೧೯ ಎರಡನೇ ಅಲೆ ದಿನದಿಂದ ದಿನಕ್ಕೆ ವೇಗದಿಂದ ಹರಡುತ್ತಿದೆ. ಅದನ್ನು ತಡೆಗಟ್ಟಲು ಸರಕಾರ ಜನತಾ ಕರ್ಫ್ಯೂ ಜಾರಿಗೆ ತಂದಿದೆ. ಆದರೆ ಜನ ಮಾತ್ರ ಜಾಗೃತರಾಗದೇ ಕೋವಿಡ್-೧೯ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೀಗೆ ಅಜಾಗರೂಕತೆಯಿಂದ ವರ್ತಿಸಿ ಅಪಾಯ ತಂದುಕೊಳ್ಳಬೇಡಿ ಎಂದು ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಮ್.ಎ.ಮೌಲ್ವಿ ಹೇಳಿದ್ದಾರೆ.
ಅವರು ಗದಗ ಎಪಿಎಂಸಿಯಲ್ಲಿ ಗದಗ ಜಿಲ್ಲಾ ವಕೀಲರ ಸಂಘ ಹಾಗೂ ಗದಗಹ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಗದಗ ಎಪಿಎಂಸಿ ಮಾರುಕಟ್ಟೆಗೆ ಹಳ್ಳಿಯಿಂದ ಟಾಟಾಏಸ್ ಗಾಡಿಗಳಲ್ಲಿ ೨೦-೨೫ ಜನ ಕುಳಿತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬರುತ್ತಿದ್ದಾರೆ. ದಯವಿಟ್ಟು ಈ ರೀತಿ ಸಂಚರಿಸಿ ವೈರಸ್ ಹರಡಲು ಕಾರಣೀಕರ್ತರಾಗಬೇಡಿ. ಎಲ್ಲರೂ ಸರಕಾರದ ನಿಯಮಾವಳಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚಾರ ಮಾಡಿ ಹಾಗೂ ಪ್ರತಿಯೊಬ್ಬರೂ ಮಾಸ್ಕನ್ನು ತಪ್ಪದೇ ಧರಿಸಿ. ನಿಮ್ಮ ಹಳ್ಳಿಯಲ್ಲಿ ವೈರಸ್ ಹರಡದಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ, ಗದಗ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಬಿ.ಮತ್ತೂರ, ಜಂಟಿ ಕಾರ್ಯದರ್ಶಿ ಕುಮಾರ ಜಿ.ವಿ, ನ್ಯಾಯವಾದಿಗಳಾದ ವೆಂಕಟೇಶ ಕುಲಕರ್ಣಿ, ಯಲ್ಲಪ್ಪ ಕುರಟ್ಟಿ, ಎಪಿಎಂಸಿ ಸಿಬ್ಬಂದಿಗಳಾದ ಮಹಾಂತೇಶ ಪಾಟೀಲ, ರಮೇಶ ಶೆಟ್ಟಮ್ಮನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Leave a Reply