BelagaviBengalurukaranatakaState

ಕೊರೋನಾಗೆ ಔಷಧಿ ಹುಡಕಬೇಡಿ, ನಿಮ್ಮ ಮನೆಯಲ್ಲೇ ಇದೇ ರಾಮಬಾಣ: ಸಮಯ ಕೊಟ್ಟು ಓದಿ


ಕೊರೋನಾ…..

ಏನು ಆಗಲ್ಲ ಬಿಡು ಅನ್ನುವಷ್ಟು ಅಸಡ್ಡೆ ಮಾಡುವ ರೋಗವಲ್ಲ, ಹಾಗೆಂದು ಅತೀ ಭಯಾನಕ ಎಂದು ಭಯ ಪಡುವದೂ ಬೇಕಿಲ್ಲ. ಇನ್ನೂ ವೈದ್ಯಕೀಯ ಲೋಕ ಇದಕ್ಕೆ ಔಷಧಿ ಕಂಡುಹಿಡಿದಿಲ್ಲ ಆದರೂ, ಕೊರೋನಾ ಎದುರಿಸಲು ಮನೆಯಲ್ಲೇ ಇರುವ ಮದ್ದನ್ನು ಬಳಸಿದರೆ ಸಾಕು. ಅದೂಕೂಡ ಸಂಜಿವೀನಿಯಂತೆ ಕೆಲಸ ಮಾಡಬಹುದು. ನನಗೆ ತಿಳಿದ ಮಟ್ಟಿಗೆ ಕೋವಿಡ್ ನಿಂದ ಸ್ವಲ್ಪ ಮಟ್ಟಿಗೆ ದೂರವಿರಲು ನಾವು ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಇಲ್ಲಿ ಬರದಿದ್ದೇನೆ ಜೊತೆಗೆ ಸ್ವತಃ ನಾನು ಪಾಲಿಸುತ್ತಿದ್ದೇನೆ. ನೀವೂ ಪಾಲಿಸಿದರೆ ಸಹಾಯವಾಗಬಹುದು ಓದಿ ತಿಳಿದುಕೊಳ್ಳಿ. ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.

1. ಪ್ರತಿದಿನ ಬಿಸಿ ನೀರನ್ನು ಕಡ್ಡಾಯವಾಗಿಸಿ: ತಂಪು ಪಾನೀಯ ಮತ್ತು ತಂಪಾದ ನೀರಿಗೆ ಗುಡ್ ಬೈ ಹೇಳಿ ಪ್ರತಿ ದಿನ, ಪ್ರತಿಸಾರಿ ಬಿಸಿ ನೀರು ಕುಡಿಯಿರಿ. ಆರೋಗ್ಯಕ್ಕೂ ಒಳ್ಳೆಯದು ಕೋವಿಡ್ ಗೂ ರಾಮಬಾಣ.

3. ವಿಟಾಮಿನ್ “ಸಿ” ಟ್ಯಾಬ್ಲೆಟ್ ಸೇವಿಸಿ: ಕೋವಿಡ್ ಎದುರಿಸಲು ಔಷಧಿ ಅಂಗಡಿಗಳಲ್ಲಿ ಸಿಗುವ ವಿಟಾಮಿನ್ “ಸಿ” ಟ್ಯಾಬ್ಲೆಟ್ ಗಳನ್ನು ಸೇವಿಸಿ. ವಯಸ್ಕರು ಪ್ರತಿದಿನ ಸೇವಿಸಿ, ಕೆಲವು ದಿನಗಳ ಬಳಿಕ ಎರಡು ದಿನಕ್ಕೆ ಒಂದು ಸೇವಿಸಿ ಇದರಿಂದ ದೇಹದಲ್ಲಿ “ಸಿ” ಅಂಶ ಹೆಚ್ಚುತ್ತದೆ. ಚಿಕ್ಕ ಮಕ್ಕಳಿಗೆ ನೀಡಬೇಡಿ.

4. ದಿನಕ್ಕೆ ಒಂದೂ ಭಾರಿಯಾದರೂ ಕಷಾಯ (“ಖಾಡಿ” ಇದು ಗ್ರಾಮೀಣ ಭಾಷೆ) ಸೇವಿಸಿ: ಕಷಾಯದಲ್ಲಿ ಕಾಳು ಮೆಣಸು, ಹಸಿ ಅಥವಾ ವಣ ಶುಂಠಿ, ಲವಂಗ, ಸ್ವಲ್ಪ ಜೀರಿಗೆ ಇರಲಿ ಅದನ್ನು ಚೆನ್ನಾಗಿ ಕುದಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಬೆರಸಿ ಕುಡಿಯಿರಿ. ಇದರಿಂದ ಕೊರೋನಾ ಸೋಂಕುಗಳಾದ ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳು ನಿವಾರಣೆಯಾಗುತ್ತದೆ.

5. ದಿನಕೊಂದು ಬಾರಿ ಮೂಗು ಮತ್ತು ಬಾಯಿಯಿಂದ ಹಬೆ (ಹೊಗೆ) ತೆಗೆದುಕೊಳ್ಳಿ:
ಒಂದು ಪಾತ್ರೆಯಲ್ಲಿ ಚೆನ್ನಾಗಿ ನೀರನ್ನು ಕಾಯಿಸಿ ಅದರಲ್ಲಿ ವಿಕ್ಸ್ ಅಥವಾ ವೈದ್ಯರ ಸಲಹೆಯಂತೆ ಸಿಗುವ ಮಾತ್ರೆಗಳನ್ನು ಹಾಕಿ ಕನಿಷ್ಟ 3-5 ನಿಮಿಷ ಮೂಗು ಮತ್ತು ಬಾಯಿಯಿಂದ ಅದರ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ಕಫ ದೂರವಾಗುತ್ತದೆ ಜೊತೆಗೆ ಉಸಿರಾಟದ ತೊಂದರೆ ನಿವಾರಣೆ ಮಾಡಬಹುದು. ಪ್ರತಿದಿನ ಒಂದೂ ಬಾರಿಯಾದರೂ ಹೀಗೆ ಮಾಡಿ.

6. ದಿನಕ್ಕೊಂದು ಚಮಚ “ಚವನಪ್ರಾಶ್” ಸೇರಿಸಿ:
ಚವನಪ್ರಾಶ ಇದು ಔಷಧಿ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇದನ್ನು ಪ್ರತಿದಿನ ಒಂದು ಚಮಚ ಸೇವಿಸಿ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೂ ಹಾಲಿನಲ್ಲಿ ಬೆರಸಿ ಕೊಡಬಹುದು.

7. ದಿನಕ್ಕೆ ಒಂದು ಘಂಟೆಯಾದರೂ ಬಿಸಿಲಿನಲ್ಲಿ ಇರಿ:
ಬಿಸಿಲಲ್ಲಿ ವಿಟಾಮಿನ್”ಡಿ” ಇರುವುದರಿಂದ ದಿನಕ್ಕೆ ಒಂದು ಘಂಟೆಯಾದರು ಬಿಸಿಲ್ಲಿ ಇರಿ. ಮುಂಜಾವಿನ ಬಿಸಿಲಾದರೆ ಆರೋಗ್ಯಕ್ಕೆ ಹಿತ.

8: ಇನ್ನು ಈಗಾಗಲೆ ಪಾಲಿಸುತ್ತಿರುವ, ಮಾಸ್ಕ, ಸ್ಯಾನಿಟೈಸರ್’ ಕೈತೊಳೆಯುವ ಕ್ರಮಗಳನ್ನು ಮುಂದುವರೆಸಿ.

ಈ ಮೇಲಿನ ಕ್ರಮಗಳನ್ನು ಅನುಸರಿಸುವುದರಿಂದ ಕೋವಿಡ್ ಅನ್ನು ಎದುರಿಸಲು ಸಹಾಯವಾಗುತ್ತದೆ. ಕೊರೋನಾ ವಿರುದ್ಧ ಹೋರಾಡಿ. ಒಂದು ವೇಳೆ ಅದು ಬಂದಿದ್ದರೆ ಭಯಪಡಬೇಡಿ. ಮನುಷ್ಯನಿಗೆ ಅತ್ಮಸ್ಥೈರ್ಯವೇ ಮೊದಲ ಔಷಧಿ. ಧೈರ್ಯವಾಗಿರಿ ಅದು ನಿವಾರಣೆಯಾಗುವ ರೋಗವಾಗಿದೆ.


Leave a Reply