Koppal

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಪೊಲೀಸ್ ಅಧಿಕಾರಿಗಳ ಮೇಲೆ ಗರಂ


ಕುಷ್ಟಗಿ:ಇಂದು ಬೆಳಿಗ್ಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಕುಷ್ಟಗಿ ಸಿಪಿಐ ಅವರ ಮೇಲೆ ಗರಂ ಆಗಿರುವ ದೃಶ್ಯ ಕಂಡುಬಂದಿತು.ಕುಷ್ಟಗಿಯ ಜನರು ಮಾನ್ಯ ಶಾಸಕರಿಗೆ ದೂರವಾಣಿ ಕರೆಯ ಮೂಲಕ ಪೊಲೀಸರು ವಿನಾಕಾರಣ ತೊಂದರೆ ಕೊಡುವ ಬಗ್ಗೆ ಮಾಹಿತಿ ತಿಳಿಸಿದಾಗ ಮಾನ್ಯ ಶಾಸಕರು ಸ್ಥಳಕ್ಕೆ ಧಾವಿಸಿದರು ಸ್ಥಳದಲ್ಲಿದ್ದ ಪೊಲೀಸರಿಗೆ ಮಾನ್ಯ ಶಾಸಕರು ಮಾಹಿತಿ ಇಲ್ಲದೆ ಬಂದಿದ್ದರೆ ಬಿಡಬಾರದಿತ್ತು ಮತ್ತು ದಂಡವನ್ನು ಹಾಕಬೇಕಿತ್ತು.ಆದರೆ ಮಾಹಿತಿ ಮತ್ತು ಹಾಸ್ಪಿಟಲಿನ ಬಿಲ್ಗಳನ್ನು ತೋರಿಸಿದಾಗ ನೀವು ಏಕೆ ಬಿಟ್ಟಿಲ್ಲ ಎಂದು ಪೊಲೀಸರ ಮೇಲೆ ಗರಂ ಆದರು .ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿ ಪಿ ಐ.. ಮತ್ತು ಪಿ.ಎಸ್.ಐ ನೈಜ ಘಟನೆಯನ್ನು ತಿಳಿಸಿ ಮಾನ್ಯ ಶಾಸಕರಿಗೆ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಜನರು ಕೂಡ ವಿನಾಕಾರಣ ಹೊರಗಡೆ ಬರುತ್ತಿದ್ದಾರೆ. ಅದಕ್ಕಾಗಿ ನಾವು ಹಿಡಿದಿದ್ದೇವೆ ಹೊರತು ಯಾವುದೇ ದ್ವೇಷದಿಂದಲ್ಲ ಎಂದು ಹೇಳಿದರು. ಆಗ ಶಾಸಕರು ಮಾತನಾಡುತ್ತಾ ಈಗಾಗಲೇ ರಸಗೊಬ್ಬರ ,ಗ್ಯಾಸ,ಪೆಟ್ರೋಲ್ ,ಡಿಸೇಲ್, ಸೇರಿದಂತೆ ರೈತರಿಗೆ ಬಡವರಿಗೆ ಬೇಕಾದ ವಸ್ತುಗಳು ಗಗನಕ್ಕೇರಿವೆ.ಇಂತಹ ಸಮಯದಲ್ಲಿ ರೈತರು ಎಣ್ಣಿ ಕುಡಿದು ಸಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸರ್ಕಾರ ಸಂಬಳ ನೀಡುತ್ತಿವೆ ,ಮತ್ತು ಸಂಬಳವನ್ನು ಹೆಚ್ಚು ಮಾಡುತ್ತಾರೆ.ಆದರೆ ರೈತರಿಗೆ ಯಾರು ಸಂಬಳ ಕೊಡುತ್ತಾರೆ,ನಾವು ಮತ್ತು ‌ನೀವು ಬದುಕುತ್ತಿರುವುದು ರೈತರ ಹಾಗೂ ಬಡವರ ಆಸರೆಯಲ್ಲಿ, ಹಾಗಾಗಿ ರೈತರ ಹಾಗೂ ಬಡವರ ಸೇವೆ ಮಾಡಬೇಕೆ ಹೊರತು ಅವರಿಗೆ ನಾವು ತೊಂದರೆ ಕೊಡಬಾರದು.ಹಾಗಾಗಿ ರೈತರಿಗೆ ಹಾಗೂ ಬಡ ಕುಟುಂಬದ ವರಿಗೆ ತಪ್ಪು ಮಾಡದಿರುವವರಿಗೆ ದಂಡ ಹಾಕಬಾರದು. ತೊಂದರೆ ಕರೋನಾ ವೈರಸ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದನ್ನು ಅರಿತು ನಮ್ಮ ಕುಷ್ಟಗಿ ತಾಲೂಕಿನ ಜನಗಳು ಕೂಡ ತಿಳಿದುಕೊಂಡು ಅಧಿಕಾರಿಗಳಿಗೆ ಮತ್ತು ಮಾನ್ಯ ಶಾಸಕರಿಗೆ ತೊಂದರೆ ಕೊಡಬಾರದು ಎಂಬುದೇ ನಮ್ಮ ಆಶಯ…..

ಆರ್ ಶರಣಪ್ಪ ಗುಮಗೇರಾ…


Leave a Reply