Koppal

ಕುರುಡು ಸರ್ಕಾರ ಏನೂ ಮಾಡುತ್ತಿಲ್ಲ ವಿರೋಧ ಪಕ್ಷದ ನಾಯಕರು ಕಣ್ಣುಮುಚ್ಚಿ ಕುಳಿತಿದ್ದಾರೆ : ರೈತ ಮುಖಂಡ ಆರೋಪ 


ಗಂಗಾವತಿ ರಾಜ್ಯ ರೈತ ಸಂಘದ ಮುಖಂಡ ಎಸ್. ತಿಮ್ಮಣ್ಣ ವಡ್ಡರ ಮಾತನಾಡಿ

ಕರೋನಾ ವೈರಸ್ ಎರಡನೇ ಅಲೆಯಲ್ಲಿ ಮೂವತ್ತು ವರ್ಷದ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ
ಸರ್ಕಾರ ಎಚ್ಚೆತ್ತುಕೊಳ್ಳಬೇಕು ಏಕೆಂದರೆ ಮನೆಗೆ ಆಧಾರ ಸ್ತಂಭ ಯುವಕರು ಈ ದೇಶ ಕಾಯುವವರು ಯುವಕರು ಹೆಚ್ಚಿನ ಜಾಗ್ರತೆ ಮೂಡಿಸಬೇಕು ಸರ್ಕಾರ

ಕೃಷಿ ಸಚಿವರೇ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೇ ನಮ್ಮ ರೈತರ ಕೂಗು ನಿಮಗೆ ಕೇಳಿಸುತ್ತಿಲ್ಲವೇ
ಕೊಪ್ಪಳ ಜಿಲ್ಲೆಯಲ್ಲಿ ಭತ್ತದ ನಾಡು ಎಂದೇ ಪ್ರಸಿದ್ಧವಾದ ಗಂಗಾವತಿ ಕಾರಟಗಿ ಹಾಗೂ ಜಿಲ್ಲೆಯಲ್ಲಿ ಬೆಳೆದ ಭತ್ತ ಕೊಪ್ಪಳ ಜಿಲ್ಲೆಯಾದ್ಯಂತ ಬೆಳೆದಂಥ ಭತ್ತ.. ಭತ್ತವನ್ನು ಹೊಲದಲ್ಲಿ ಗದ್ದೆಯಲ್ಲಿ ರಾಶಿ ಹಾಕಿಕೊಂಡು ಕುಳಿತಿದ್ದಾರೆ ರೈತರು ಭತ್ತ ಖರೀದಿದಾರರು ಯಾರು ಬರುತ್ತಿಲ್ಲ
ಭತ್ತಕ್ಕೆ ಬೆಳೆದ ಸರಿಯಾದ ಬೆಲೆ ಏನೂ ಇಲ್ಲ

ರಸಗೊಬ್ಬರ ಕೀಟನಾಶಕ ಬೆಲೆ ಹೆಚ್ಚಳವಾಗಿದೆ
ಬೆಳೆದಂಥ ರೈತರು ಕರೋನ ವೈರಸ್ ನಿಂದ ಕಂಗಾಲಾಗಿದ್ದಾರೆ ರೈತರು ಎಣ್ಣೆ ಕುಡಿಯುವ ಪರಿಸ್ಥಿತಿ ಬಂದಿದೆ ಅದಕ್ಕೆ ರೈತರಿಗೆ ವಿಶೇಷ ಪ್ಯಾಕೇಜನ್ನು ಕೊಡಬೇಕು ಈ ಕೂಡಲೇ ಪ್ಯಾಕೇಜನ್ನು ಜಾರಿಗೊಳಿಸಬೇಕು ಎಂದು ರೈತ ಮುಖಂಡ ಎಸ್.ತಿಮ್ಮಣ್ಣ ವಡ್ಡರ್ ಅವರು ಸರಕಾರಕ್ಕೆ ಎಚ್ಚರಿಕೆ ಕೊಟ್ಟರು
(ಗಂಗಾವತಿ ವರದಿಗಾರ ಹನುಮೇಶ್ ಬಟಾರಿ )


Leave a Reply