Koppal

*ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ


ಕುಷ್ಟಗಿ: ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದ ಮಾರುತಿ ಸರ್ಕಲ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ಬೆಂಬಲಿಗರು,ಚುನಾವಣಾ ಫಲಿತಾಂಶ ನಂತರ ,ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ.ಈಗಾಗಲೇ ಹಲವಾರು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸುಗುತ್ತಿದ್ದಾರೆ. ಈಗಾಗಲೇ ಪಕ್ಷದ ಮುಖಂಡರ,ಮೇಲೆ ಮತದಾರರ ಮೇಲೆ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ತೆರಳಿ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದಾರೆ.ಹಾಗಾಗಿ ಇಂತಹ ದುರಾಡಳಿತ ನಡೆಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಷ್ಠಗಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಉಮೇಶ ಯಾದವ್,ಪುರಸಭೆ ಅದ್ಯಕ್ಷ ಜಿ.ಕೆ.ಹಿರೇಮಠ.ಲ,ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಚಂದ್ರುಕಾಂತ್ ವಡಗೇರಿ,ಮುಖಂಡರಾದ ಶಂಕರಗೌಡ ಪಾಟೀಲ್ ,ತಾ.ಪಂ.ಸದಸ್ಯರಾದ ಮಹಾಂತೇಶ ಬದಾಮಿ, ಶರಣು ಸೇರಿದಂತೆ ಇನ್ನಿತರ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

ವರದಿಗಾರರು-ಆರ್ ಶರಣಪ್ಪ ಗುಮಗೇರಾ.


Leave a Reply