Ballary

ಕಷ್ಟ ಕಾಲದಲ್ಲಿ ಸುಕೋ ಬ್ಯಾಂಕಿನ ಸೇವೆ ಶ್ಲಾಘನೀಯ :- ಲಕ್ಷ್ಮಣ ಸವದಿ


ಬಳ್ಳಾರಿ: ಕರೋನಾ ಕಷ್ಟಕಾಲದಲ್ಲಿ ಸೂಕ್ತವಾದ ನರ‍್ಣಯವನ್ನು ಕೈಗೊಂಡು ನಮ್ಮ ಜನರಿಗೆ ನೆರವಾಗಿ ಜೀವವನ್ನು ಉಳಿಸಲು ಸುಕೋ ಬ್ಯಾಂಕ್ ಸಿಂಧನೂರು ಪಟ್ಟಣದಲ್ಲಿ ಐಎಂಎ ಮತ್ತು ಜನತಾ ಸೌಹರ‍್ದ ಸಹಕಾರಿ ಜೊತೆ ಸುಸಜ್ಜಿತವಾದ ಆಸ್ಪತ್ರೆಯನ್ನು ಪ್ರಾರಂಭ ಮಾಡುತ್ತಿರುವುದು ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಿಂದ ಬುಧವಾರ ಆನ್ಲೈವನ್ನ ಲ್ಲಿ ಈ ವಿಶೇ ಷ ಕೋವಿಡ್ ಆಸ್ಪತ್ರೆಯನ್ನು ಉದ್ಘಾಟನೆ ನೆರವೇರಿಸಿ, ಮಾತನಾಡಿದ ಅವರು, ಸುಕೋ ಬ್ಯಾಂಕ್ನ ಆಡಳಿತ ಮಂಡಲಿ ಸದಸ್ಯರು, ಭಾರತೀಯ ವೈದ್ಯಕೀಯ ಮಂಡಲಿ ವೈದ್ಯರುಗಳು ಮತ್ತು ಜನತಾ ಸೌಹರ‍್ದ ಸಹಕಾರಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಕೋವಿಡ್ ಸೋಂಕಿತರಿಗೆ ರಾಜ್ಯದಲ್ಲಿ ಪ್ರಸ್ತುತ ಬೆಡ್ಗಾಳ ಕೊರತೆ, ಚಿಕಿತ್ಸೆಯ ಸಮಸ್ಯೆ, ಆಕ್ಸಿಜನ್ ಪೂರೈಕೆ ಸೇರಿ ಅನೇಕ ಸಮಸ್ಯೆಗಳು ವ್ಯಾಪಕವಾಗಿ ಇರುವಾಗ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸುಕೋ ಬ್ಯಾಂಕ್ ಅನೇಕರ ಜೀವರಕ್ಷಣೆಯ ಸಂಕಲ್ಪದೊಂದಿಗೆ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿರುವುದು ಬ್ಯಾಂಕ್ನ್ ಜನಪರವಾದ ಚಿಂತನೆ ಮತ್ತು ಕಾಳಜಿಗೆ ಸಾಕ್ಷಿ ಎಂದರು.

ರ‍್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತಲೂ ಶೇ. 50ಕ್ಕಿಂತಲೂ ಕಡಿಮೆ ಶುಲ್ಕವನ್ನು ಪಡೆಯುವ ಮೂಲಕ ಜನಸೇವೆಗೆ ಸುಕೋ ಬ್ಯಾಂಕ್, ಐಎಂಎ ಮತ್ತು ಜನತಾ ಸೌಹರ‍್ದ ಸಹಕಾರಿ ಮುಂದಾಗಿರುವುದು ಮಹತ್ವದ ವಿಚಾರ. ವಿಶೇಷವಾದ ಸಾಂದ್ರಿತ ಆಕ್ಸಿಜನ್ ಯಂತ್ರಗಳ ವ್ಯವಸ್ಥೆಯೊಂದಿಗೆ ಈ ಆಸ್ಪತ್ರೆ ಪ್ರಾರಂಭವಾಗಿರುವುದು ಅಭಿನಂದನರ‍್ಹ ಎಂದರು.

ಸುಕೋ ಬ್ಯಾಂಕ್ನವ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ, ಅಧ್ಯಕ್ಷ ಮೋಹಿತ್ ಮಸ್ಕಿ ಅವರ ಜನಸೇವೆ, ಜನಪರ ಬದ್ಧತೆಗೆ ಈ ಆಸ್ಪತ್ರೆ ಸಾಕ್ಷಿಯಾಗಿದೆ. ಕರೋನಾ ಕಷ್ಟಕಾಲದಲ್ಲಿ ವೈದ್ಯರು ಸೇವೆಗೆ ಮುಂದಾಗಿರುವುದು ನಿಜಕ್ಕೂ ಅವರೆಲ್ಲರ ವೃತ್ತಿ ಬದ್ಧತೆಯನ್ನು ತೋರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ವೆಂಕಟರಾವ್ ನಾಡಗೌಡ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, `ಸುಕೋ – ಐಎಂಎ ಕೋವಿಡ್ ಆಸ್ಪತ್ರೆ’ಗೆ ಅಗತ್ಯವಿರುವ ಆಕ್ಸಿಜನ್ ಅನ್ನು ಗಿಣಿಗೇರಾದಿಂದ ತ್ವರಿತವಾಗಿ ತುಂಬಿಸಿಕೊಂಡು ಸುಕೋ ಆಸ್ಪತ್ರೆಗೆ ತಲುಪಿಸಲು ಬ್ಯಾಂಕ್ ಸ್ವಂತದ ವಾಹನದ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೇ, ಇಲ್ಲಿಯೇ ಆಕ್ಸಿಜನ್ ಉತ್ಪಾದನೆ ಮಾಡಿಕೊಳ್ಳಲು ಯಂತ್ರಗಳನ್ನು ಅಳವಡಿಸಲಾಗಿದ್ದು, ಈ ಆಸ್ಪತ್ರೆಯಲ್ಲಿ ಆಕ್ಸಿಜನ್ನೋ ಕೊರತೆ ಉಂಟಾಗುವುದಿಲ್ಲ ಎಂದರು.

ಡಾ. ಶಿವರಾಜ ಪಾಟೀಲ್ ಅವರು ಮಾತನಾಡಿ, 30 ಹಾಸಿಗೆಗಳ ಸಂಪರ‍್ಣ ಸುಸಜ್ಜಿತವಾದ ಕೋವಿಡ್ ಆಸ್ಪತ್ರೆಯನ್ನು ಸುಕೋ ಬ್ಯಾಂಕ್ನಲ ನೆರವಿನಿಂದ ಪ್ರಾರಂಭಿಸಲಾಗದೆ. ದಿನಕ್ಕೆ ರ‍್ವ ವೈದ್ಯರಂತೆ ಎಲ್ಲಾ ದಿನಗಳಲ್ಲಿ ರ‍್ವ ವೈದ್ಯ ದಿನವಿಡೀ ರ‍್ತವ್ಯ ನರ‍್ವಹಿಸುವರು. ನುರಿತ, ತಜ್ಞ ಮತ್ತು ಅನುಭವಿ ರ‍್ಸ್ ಗಳು ಸೋಂಕಿತರ ಶುಶ್ರೂಷೆ ಮಾಡಲಿದ್ದಾರೆ. ಸೋಂಕಿತರಿಗೆ ಯಾವುದೇ ಸಮಸ್ಯೆ ಆಗದಂತೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸೋಂಕಿನ ಲಕ್ಷಣ ರಹಿತ ಮತ್ತು ಸೋಂಕಿತರಿಗೆ ಮಾತ್ರ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನಿರಂತರ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಈ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.

ಸುಕೊ ಬ್ಯಾಂಕ್ನಾ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಸ್ವಾಗತ ಕೋರಿ, ಕಲ್ಯಾಣ ರ‍್ನಾಟಕ ಪ್ರದೇಶದಲ್ಲಿ ಪ್ರಪ್ರಥಮವಾಗಿ ಸಹಕಾರಿ ಕ್ಷೇತ್ರದಲ್ಲಿ ಸುಸಜ್ಜಿತವಾದ, ಹವಾನಿಯಂತ್ರಿತ `ಸುಕೋ – ಐಎಂಎ ಕೋವಿಡ್ ಆಸ್ಪತ್ರೆ’ ಪ್ರಾರಂಭವಾಗಿದೆ ಎಂದರು.

ಸುಕೋ ಬ್ಯಾಂಕ್ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಕರ‍್ಯಕ್ರಮ ನರ‍್ವಹಿಸಿದರು. ಜನತಾ ಸೌಹರ‍್ದ ಸಹಕಾರಿಯ ವ್ಯವಸ್ಥಾಪಕ ನರ‍್ದೇಶಕ ಶಿವಕುಮಾರ್ ಅವರು ವಂದನರ‍್ಪಣೆ ಸಲ್ಲಿಸಿದರು.


Leave a Reply