State

ರೈಲ್ವೇ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ: ಪೊಲೀಸ್ ಎಡಿಜಿಪಿ ಭಾಸ್ಕರರಾವ್ ಚಾಲನೆ


ಹುಬ್ಬಳ್ಳಿ:  ಕಿಲ್ಲರ್ ಕೊರೋನಾ ವೈರಸ್ ಎರಡನೇ ಅಲೆಯು ಜನರಿಗೆ ಆರ್ಥಿಕ ಸಂಕಷ್ಟ ಮಾತ್ರವಲ್ಲದೇ ಜೀವನಕ್ಕೆ ಸಮಸ್ಯೆಯನ್ನು ತಂದೊಡ್ಡಿದೆ. ಈ ನಿಟ್ಟಿನಲ್ಲಿ ಕೂಲಿ ಕಾರ್ಮಿಕರ ಪರಿಸ್ಥಿತಿ ಹೇಳ ತೀರದಾಗಿದೆ. ಈ ಹಿನ್ನೆಲೆಯಲ್ಲಿ ಜೈನ್ ಸಮಾಜ ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಮುಂದೆ ಬಂದಿದೆ.
ಹೌದು.. ಜೈನ ಸಮಾಜದ ವತಿಯಿಂದ ಇಂದು ಹುಬ್ಬಳ್ಳಿಯ ನೈಋತ್ಯ ರೈಲ್ವೇ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರಿಗೆ ಮಹೇಂದ್ರ ಸಿಂಘಿ ನೇತೃತ್ವದಲ್ಲಿಂದು ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು. ಜೀವನ ಅವಶ್ಯಕ ಆಹಾರ ಉತ್ಪನ್ನಗಳನ್ನು ವಿತರಣೆ ಮಾಡಲಾಗಿದ್ದು, ಎಲ್ಲರಿಗೂ ಕೊರೋನಾ ವೈರಸ್ ನಿಂದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇನ್ನೂ ಕಾರ್ಯಕ್ರಮದಲ್ಲಿ ರೈಲ್ವೇ ವಲಯದ ಎಡಿಜಿಪಿ ಭಾಸ್ಕರರಾವ್ ಆಗಮಿಸಿ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಇದೇ ವೇಳೆ ಜೈನ ಸಮಾಜದ ಮುಖಂಡರು ಹಾಗೂ ರೈಲ್ವೇ ಅಧಿಕಾರಿಗಳು ಸಾಥ್ ನೀಡಿದರು.

Leave a Reply