Ballary

ಅಸಹಾಯಕರಿಗೆ ಆಹಾರ ವಿತರಣೆ ಎಬಿವಿಪಿಯಿಂದ ಮಾನವೀಯ ಕಾರ್ಯ


ಗದಗ : ಕೋರೋನಾ ಸೋಂಕಿನ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂನಿಂದ ಕಂಗೆಟ್ಟಿರುವ ನೂರಾರು ಜನರಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿನಿತ್ಯ ಆಹಾರ ಪೂರೈಸುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಇಲ್ಲಿಯ ಜ್ಞಾನಭಾರತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿನಿತ್ಯ ಬಿಸಿಬಿಸಿ ಆಹಾರ ತಯಾರಿಸಿ ಪೊಟ್ಟಣಗಳಲ್ಲಿ ರೇಲ್ವೇ ನಿಲ್ದಾಣದಲ್ಲಿನ ಅಸಹಾಯಕರಿಗೆ,ಕಟ್ಟಡ ನಿರ್ಮಾಣ ಕೂಲಿಕಾರರು,ರಸ್ತೆಯಲ್ಲಿನ ಭೀಕ್ಷÄಕರಿಗೆ ವಿತರಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಪ್ರಾರಂಭವಾಗಿರುವ ಈ ಕಾರ್ಯ ಸಾರ್ವಜನಿಕರಿಂದ ಭಾರೀ ಶ್ಲಾಘನೆಗೋಳಗಾಗಿದೆ.
ಎಬಿವಿಪಿ ಕಾರ್ಯಕರ್ತರ ಸೇವೆಯನ್ನು ಗಮನಿಸಿ ನಗರದಲ್ಲಿನ ಅನೇಕರು ಆಹಾರ ಧಾನ್ಯಗಳನ್ನು ನೀಡುತ್ತಿದ್ದಾರೆ.ಪ್ರತಿನಿತ್ಯ ವಿವಿಧ ಬಗೆಯ ಆಹಾರ ತಯಾರಿಸಿ ಅಸಹಾಯಕರಿಗೆ ನೀಡಲಾಗುತ್ತಿದೆಯೆಂದು ಎಬಿವಿಪಿ ನಗರ ಸಹಕಾರ್ಯದರ್ಶಿ ಗಿರೀಶ ನರಗುಂದಕರ ಹೇಳಿದರು.
ಸ್ವಯಂ ಸೇವಕರ ಪಡೆ: ಕೋರೋನಾ ಸೋಂಕಿನಿAದ ಕಂಗೆಟ್ಟಿರುವ ಸಂದರ್ಭದಲ್ಲಿ ಎಬಿವಿಪಿಯ ನೂರಾರು ಸ್ವಯಂಸೇವಕರು ಈ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಅತ್ಯAತ ಪ್ರತಿಷ್ಟಿತ ಕುಟುಂಬಗಳಿAದ ಬಂದಿರುವ ಎಬಿವಿಪಿ ಕಾರ್ಯಕರ್ತರು ತಮ್ಮ ಶ್ರೀಮಂತಿಕೆ,ಸ್ಥಾನಮಾನಗಳನ್ನು ಮರೆತು ಅವಳಿ ನಗರದಲ್ಲಿನ ರಸ್ತೆಗಳಲ್ಲಿ ಸಂಚರಿಸಿ ಅಸಹಾಯಕರು,ಕೂಲಿಕಾರ್ಮಿಕರು,ಭೀಕ್ಷÄಕರನ್ನು ಹುಡುಕಾಡಿ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ.
ಎಬಿವಿಪಿ ಕಾರ್ಯಕರ್ತರಿಗೆ ನಗರದ ಕಿಲ್ಲಾ ಪ್ರದೇಶದಲ್ಲಿನ ಸಾಮಾಜಿಕ ಕಾರ್ಯಕರ್ತರಾದ ಸಂಭಾಜೀರಾವ ಕಟ್ಟಿಮನಿ,ಗಣೇಶ ಕಮ್ಮಾರ,ರವಿ ಕಟ್ಟಿಮನಿ,ನವೀನ ಕಟ್ಟಿಮನಿ ಪ್ರತಿನಿತ್ಯ ಉಚಿತವಾಗಿ ಆಹಾರ ಪದಾರ್ಥಗಳನ್ನು ತಯಾರಿಸಿ ಕೊಡುವ ಮೂಲಕ ಕೈಜೋಡಿಸಿದ್ದಾರೆ.
ಪ್ರಾರಂಭವಾದುದು ಹೇಗೆ?:ಸೆಮಿ ಲಾಕ್‌ಡೌನ್ ಪ್ರಾರಂಭವಾದ ಕೂಡಲೇ ಅವಳಿ ನಗರದಲ್ಲಿ ರಸ್ತೆಗಳಲ್ಲಿ ಜನಸಂಚಾರವನ್ನು ಸ್ಥಗೀತಗೋಳಿಸಲಾಯಿತು. ಆನಸಂಚಾರ ಸ್ಥಗಿತಗೋಳಿಸಿದ್ದರಿಂದ ಅವಳಿ ನಗರದಲ್ಲಿನ ಭೀಕ್ಷÄಕರಿಗೆ ಭೀಕ್ಷೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಎಬಿವಿಪಿ ಜಿಲ್ಲಾ ಪ್ರಮುಖ ಡಾ.ಪುನೀತಕುಮಾರ ಬೆನಕನವಾರಿ, ರವಿ ಮಾನ್ವಿ,ನಗರ ಕಾರ್ಯದರ್ಶಿ ಗಿರೀಶ ನರಗುಂದಕರ ಪ್ರಾರಂಭÀದಲ್ಲಿ ಸ್ವತ: ತಾವೇ ವಂತಿಗೆ ನೀಡಿ ಯೋಜನೆಯನ್ನು ಪ್ರಾರಂಭಿಸಿದರು. ನಂತರ ವಿವಿಧ ದಾನಿಗಳ ನೆರವಿನಿಂದ ಯೋಜನೆ ಮುಂದುವರೆದಿದೆ. ಎಬಿವಿಪಿ ಕಾರ್ಯಕರ್ತರು ಒಂದು ದಿನ ಮೊಸರನ್ನ ನೀಡಿದರೇ ಮರುದಿನ ಚಿತ್ರಾನ್ನ,ಮತ್ತೊಮ್ಮೆ ಪುಳಿಯೋಗರೆ,ಪಲಾವು ತಯಾರಿಸಿ ವಿತರಿಸುತ್ತಿದ್ದಾರೆ.
ಈ ಕಾರ್ಯದಲ್ಲಿ ಎಬಿವಿಪಿ ಕಾರ್ಯಕರ್ತರುಗಳಾದ ಸಚೀನ ಮಡಿವಾಳರ, ಮಂಜುನಾಥ ಹಮ್ಮಿಗಿ,ಪವನ ಕದಡಿ,ವಿಶ್ವನಾಥ ಹಾಳಕೇರಿ,ರವಿ ನರೇಗಲ್,ಹನುಮಂತಪ್ಪ ಪಾಟೀಲ,ಕಾರ್ತೀಕ ಹಡಪದ,ಧೀರಜ ಬಳ್ಳಾರಿ,ವೀರೇಶ ಮಾನ್ವಿ ಮುಂತಾದವರು ಪಾಲ್ಗೊಂಡಿದ್ದಾರೆ.


Leave a Reply