Belagavi

ತೋಟಗಾರಿಕೆ ಬೆಳೆಗಾರರ ಹಾರ್ಟಿವಾರ್ ಗ್ರೂಪ್ ರಚನೆ


ಮೂಡಲಗಿ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಅರಭಾವಿವತಿಯಿಂದ ಕೋವಿಡ್-೧೯ರ ತುರ್ತು ಸಂದರ್ಭದಲ್ಲಿ ತೋಟಗಾರಿಕೆ ಬೆಳೆಗಾರರ ಅನುಕೂಲಕ್ಕಾಗಿ ಹಾರ್ಟಿವಾರ್ ಗ್ರೂಪ್‌ನ್ನು ರಚಿಸಲಾಗಿದೆ.
ರೈತಬಾಂಧವರು ವಿವಿಧ ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು, ತೋಟಪಟ್ಟಿ, ಔಷಧಿ, ಸಾಂಬಾರು ಸುಗಂಧಿ ದ್ರವ್ಯ ಬೆಳೆಗಳ ವಿವಿಧ ಉತ್ಪಾದನಾ ತಾಂತ್ರಿಕತೆಗಳಾದ ನೂತನ ತಳಿಗಳು, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಹನಿ ನೀರಾವರಿ, ರಸಾವರಿ, ಕಳೆ ನಿರ್ವಹಣೆ, ಸಮಗ್ರ ರೋಗ ಹಾಗೂ ಕೀಟ ನಿರ್ವಹಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಸಂಬAಧ ಪಟ್ಟ ಮಾಹಿತಿಗಳನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ಖುದ್ದಾಗಿ ಮಹಾವಿದ್ಯಾಲಯಕ್ಕೆ ಭೇಟಿ ಮಾಡಿ ತಾಂತ್ರಿಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಶುಲ್ಕ ರಹಿತ ದೂರವಾಣಿ ಸಂಖ್ಯೆ : ೧೮೦೦-೪೨೫-೭೯೧೦ ಗೆ ಮತ್ತು ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿ ೦೮೩೩೨-೨೨೦೭೦೧ ಕರೆ ಮಾಡಬಹುದು ಎಂದು ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಗೆ ಮಹಾವಿದ್ಯಾಲಯದ ತೋತಗಾರಿಕಾ ವಿಜ್ಞಾನಿ ಕಾಂತರಾಜು ವ್ಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply