Uncategorized

ರ್ತವ್ಯ ನಿರತ ಪೋಲಿಸ್ ರ ಮೇಲೆ ಗರಂ ಆದ ಶಾಸಕರ ಹೇಳಿಕೆ ಖಂಡಿಸಿದ ಹಿಂದೂ ಜಾಗರಣಾ ವೇದಿಕೆ ಕೊಪ್ಪಳ ಜಿಲ್ಲಾ ಪ್ರಮುಖರಾದ ಮಲ್ಲಿಕಾರ್ಜುನ ಗುಗ್ರಿ


ಕುಷ್ಟಗಿ:ಮಂಗಳವಾರ ದಿನ ಪೋಲಿಸ್ ಇಲಾಖೆಯವರ ಮೇಲಿನ ಹೇಳಿಕೆ ಖಂಡಿಸಿ ಮಲ್ಲಿಕಾರ್ಜುನ ಗುಗ್ರಿ ಹಿಂದೂ ಜಾಗರಣಾ ವೇದಿಕೆ ಕೊಪ್ಪಳ ಜಿಲ್ಲಾ ಪ್ರಮುಖರು ಇಂದು ಮಾದ್ಯಮ ದವರೊಂದಿಗೆ ಮಾತನಾಡಿ ಶಾಸಕರು ಈ ರೀತಿ ಪೋಲಿಸ್ ಅಧಿಕಾರಿಗಳಿಗೆ ಸಹಕಾರ ಕೊಡವುದನ್ನು ಬಿಟ್ಟು ಈ ರೀತಿ ಪಕ್ಷದ ಕಾರ್ಯಕರ್ತರನ್ನು ಮುಂದಿಟ್ಟು ಕೊಂಡು ಹೇಳಿಕೆ ನೀಡಬಾರದಿತ್ತು ಇದು ವಿಷಾಧನೀಯ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ,ಡಿಸೇಲ್ ದರ ಹೆಚ್ಚು ಮಾಡಿರುವದನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಶಾಸಕರಗಿದೆ.ಆದರೆ ಒಂದು ಶಾಸಕರ ಸ್ಥಾನದಲ್ಲಿದ್ದ ಇವರು ರಸ್ತೆಬದಿಯಲ್ಲಿ ಹಲವಾರು ಜನರನ್ನು ಸೇರಿಸಿಕೊಂಡು ರಾಜಕೀಯ ಭಾಷಣವನ್ನು ಮಾಡಬಾರದಾಗಿತ್ತು ಎಂದರು.  ಏನೇ ಆಗಲಿ ಕರೋನಾ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.ಆದರೆ ನಮ್ಮ ಕುಷ್ಟಗಿ ಶಾಸಕರು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದರು.

ವರದಿ-ಆರ್ ಶರಣಪ್ಪ ಗುಮಗೇರಾ.


Leave a Reply