Featured-Article

ಸೈಬರ್ ಭದ್ರತೆಯೇ ನಮ್ಮ ಆದ್ಯ ಕರ್ತವ್ಯ


ಕಳೆದ ವರ್ಷ ಚೈನಾ, ಭಾರತಗಳ ಮದ್ಯೆ
ಸರಹದ್ದುಗಳಲ್ಲಿ ಸಂಭವಿಸಿದ ಉದ್ರಿಕ್ತ ಪರಿಸ್ಥಿತಿಗಳ
ಹಿನ್ನಲೆಯಲ್ಲಿ, ಮೂಲ ಸೌಕರ್ಯಗಳ ಒದಗಿಸುತ್ತಿರುವ
ವ್ಯವಸ್ಥೆಗಳ ಮೇಲೆ ಡ್ರಾಗನ್ ಸದ್ದಿಲ್ಲದೇ ಮೇಲಿಂದ ಮೇಲೆ
ದಾಳಿ ನಡೆಸಿದೆ. ಇತ್ತೀಚೆಗೆ ಆ ದಾಳಿಗಳ ವಿವರಗಳು ಒಂದಾದ
ಮೇಲೊಂದು ಹೊರಬಂದಿವೆ. ಈ ವಿಷಯ ಎಲ್ಲರನ್ನು
ದಿಗ್ಭಾçಂತಿಗೆ ಗುರಿಯಾಗಿಸಿದೆ. ಸೈಬರ್ ದಾಳಿಯನ್ನು ಅತ್ಯಂತ
ಜಾಗರೂಕತೆಯಿಂದ ಮತ್ತು ಅತ್ಯಂತ ಗುಪ್ತವಾಗಿ
ಮಾಡಲಾಗಿದೆ. ಅದಕ್ಕಾಗಿ ಚೈನಾ ಸರ್ಕಾರದ ಕೃಪಾಪೋಷಿತ
ರೆಡ್ ಏಕೋ ಹ್ಯಾಕಿಂಗ್ ಸಮೂಹಗಳು ಈ ಕೆಲಸವನ್ನು
ನೆರವೆರಿಸಿದೆ.
ಯಾವ ದೇಶಕ್ಕಾಗಲಿ ವಿದ್ಯುಚ್ಛಕ್ತಿಯ ಉಪಯೋಗ
ಇದ್ದೇ ಇರುತ್ತದೆ. ಇದರ ಪ್ರಭಾವ ಆ ದೇಶದ
ಅಭಿವೃದ್ಧಿಯ ಮೇಲೆ ಬಹಳಷ್ಟು ಇರುತ್ತದೆ. ಅದೇ ರೀತಿ
ಸಾರಿಗೆ ವ್ಯವಸ್ಥೆಯು ಬಹು ಮುಖ್ಯವಾದ ವಿಭಾಗವಾಗಿದ್ದು,
ವಿದ್ಯುತ್ ಹಾಗೂ ಸಾರಿಗೆ ವ್ಯವಸ್ಥೆಯಿಂದ ದೇಶದ
ಸರ್ವತೋಮುಖಾಭಿವೃದ್ಧಿ ಸಾಧನೆಗೆ ಸಾಧ್ಯತೆ ಇದೆ.
ಬ್ಯಾಂಕಿAಗ್ ವಿಮಾ, ವೈದ್ಯಕೀಯ, ವಿದ್ಯುತ್, ಸಾರಿಗೆ ಇಲಾಖೆ, ಇಂತಹ
ಬಹುಮುಖ್ಯವಾದ ವಿಭಾಗಗಳಲ್ಲಿಯೂ ಸೂಕ್ತ ಭದ್ರತೆ
ಇಲ್ಲವೆನ್ನುವುದು ತಿಳಿಯುತ್ತದೆ.
ಬೇರೆ ಬೇರೆ ಸಂಸ್ಥೆಗಳು ಅವರವರ
ಕಾರ್ಯನಿರ್ವಹಣೆಗಾಗಿ ತಯಾರು ಮಾಡುತ್ತಿರುವ
ಸಾಫ್ಟ್ವೇರ್‌ಗಳು ಫೈರ್‌ವಾಲ್ಸ್ಗಳಲ್ಲಿಯ
ಲೋಪದೋಷಗಳು ಹ್ಯಾಕರ್ ಮಾಡುವವರಿಗೆ ಮತ್ತಷ್ಟು
ಸುಲಭತರವಾಗುತ್ತಿದೆ. ಒಂದು ಸರ್ವರ್‌ನಲ್ಲಿಯ ಐ.ಪಿ. ವಿಳಾಸ
ಗೊತ್ತಾದರೆ ಸಾಕು, ಚೈನಾದಲ್ಲೋ ಇನ್ನೊಂದು
ದೇಶದಲ್ಲೋ ಇರುವ ಹ್ಯಾಕರ್, ಇದರಲ್ಲಿಯ ಎಲ್ಲ
ಅಂಶಗಳನ್ನು ತಿಳಿದುಕೊಂಡು ಅದರಲ್ಲಿಯ ಭದ್ರತಾ
ಲೋಪಗಳನ್ನು ಆಧಾರವಾಗಿಟ್ಟುಕೊಂಡು ಕ್ಷಣಾರ್ಧದಲ್ಲಿ ಯಾವ ಸರ್ವರ್ ಒಳಗಾದರೂ ಒಳಹೊಕ್ಕಬಹುದಾಗಿದೆ. ಇದೇ
ರೀತಿ ರೆಡ್ ಏಕೋ ಎನ್ನುವ ಹ್ಯಾಕಿಂಗ್ ಗ್ರೂಪ್
ಭಾರತದೊಳಗೆ ನುಸುಳಿರುವುದಾಗಿ ಮಾರ್ಚ್ ಮೊದಲನೇ
ವಾರದಲ್ಲಿ ವಿಷಯ ಹೊರಬಂದಿದೆ.
ಭಾರತದ ಬಳಕೆದಾರರ ಸಮಾಚಾರವನ್ನು ಚೈನಾ
ಅಪ್ಲಿಕೇಷನ್‌ಗಳು, ತಮ್ಮ ದೇಶಕ್ಕೆ ರಹಸ್ಯವಾಗಿ
ರವಾನಿಸುತ್ತಿರುವ ವಿಷಯ ತಿಳಿದ ನಮ್ಮ ದೇಶದ
ಅಧಿಕಾರಿಗಳು ಹಂತ ಹಂತವಾಗಿ ಚೈನಾದ ಆ್ಯಪ್ಸ್ಗಳನ್ನು
ನಿಷೇಧಿಸಿದೆ ಎಂದರೆ ಈ ವಿಷಯ ತೀವ್ರತೆ ಯಾವ ಮಟ್ಟದೆಂದು
ತಿಳಿಯಬಹುದು. ಹಾರ್ಡ್ವೇರ್ ಉತ್ಪನ್ನಗಳ ವಿಷಯದಲ್ಲಿ
ಮತ್ತು ರ‍್ಮ್ವೇರ್ ರೂಪದಲ್ಲಿ ಗುಪ್ತಮಾಹಿತಿ ಸೇಕರಣೆ
ಮಾಡುವುದರಲ್ಲಿ, ಹಾಗೂ ಆ್ಯಪ್ಸ್ ಡೇಟಾ ಮೈನಿಂಗ್ ಇತರೆ ಎಲ್ಲ
ವಿಧಗಳಲ್ಲೂ ಚೈನಾ ಭಾರತಕ್ಕೆ ಬಹಳ
ಕಷ್ಟಕ್ಕೀಡುಮಾಡಿದೆ. ಯಾವತ್ ಪ್ರಪಂಚನೇ ಕೋವಿಡ್-೧೯
ದಿಂದಾಗಿ ೨೦೨೦ರ ಮಧ್ಯಭಾಗದಲ್ಲಿ ಪ್ರಪಂಚದಾದ್ಯAತ
ಆರೋಗ್ಯ ಸಂರಕ್ಷಣೆ, ವ್ಯಾಕ್ಸಿನ್ ತಯಾರಿಕಾ ಸಂಸ್ಥೆಗಳ
ಮೇಲೆ ಭಾರೀ ಸೈಬರ್ ದಾಳಿಯ ಪ್ರಯತ್ನ ನಡೆದಿದೆ. ಈ
ದಾಳಿಗಳೆಲ್ಲವೂ ಮುಖ್ಯವಾಗಿ ಚೈನಾ, ರಷ್ಯಾ ದೇಶಗಳಿಂದಾಗಿವೆ
ಎನ್ನುವುದು ಸಾಬೀತಾಗಿದೆ.
ಸೈಬರ್ ದಾಳಿ ನಡೆಸುತ್ತಿರುವ ಚೈನಾ, ರಷ್ಯಾ, ಪಾಕಿಸ್ತಾನ,
ಕೊರಿಯಾ ಇತರೆ ದೇಶಗಳಿಂದ ನಾವು ಮೊದಲು
ರಕ್ಷಣಾತ್ಮಕ ವ್ಯೂಹವನ್ನು ರಚಿಸಿಕೊಳ್ಳಬೇಕು. ನಂತರ
ಸದೃಢವಾದ ಸೈಬರ್ ಸೈನ್ಯವನ್ನು ಏರ್ಪಾಡು ಮಾಡುವ
ಮೂಲಕ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳಿಂದ
ಕಾಪಾಡಬೇಕು. ಡಿಜಿಟಲ್ ಇಂಡಿಯಾ ಧ್ಯೇಯ ಬಲವಾಗಬೇಕು.
ಉತ್ತಮ ಸೈಬರ್ ವ್ಯೂಹ ರಚನೆ ಮಾಡುವುದು ನಮ್ಮ
ತಕ್ಷಣ ಕರ್ತವ್ಯವಾಗಿದೆ.
ಎಸ್.ಎಲ್. ಶ್ರೀಧರಮೂರ್ತಿ,
ನಿವೃತ್ತ ಸಹಾಯಕ ಆಡಳಿತ ಅಧಿಕಾರಿ,
ಪೊಲೀಸ್ ಇಲಾಖೆ,
# ೩೧, ೨ನೇ ಮುಖ್ಯ ರಸ್ತೆ,
ಗುರುರಾಜ ಲೇಔಟ್,
ಬೆಂಗಳೂರು-೫೬೦ ೦೨೮


Leave a Reply