Belagavi

ಲಸಿಕೆಯ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಳ್ಳಲಿ: ಡಾ. ಜಿನದತ್ತ ದೇಸಾಯಿ


ಬೆಳಗಾವಿ ೭- ತಮ್ಮ ತಮ್ಮ ಕ್ಷೇತ್ರಗಳ ಎಲ್ಲ ಮತದಾರರಿಗೆ ಕೊರೊನಾ ಲಸಿಕೆಯನ್ನು ಕೊಡಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ವಿದಾನಸಭಾ ಸದಸ್ಯನ ಕರ್ತವ್ಯವಾಗಿದೆ. ಅವರು ಇನ್ನು ಹದಿನೈದು ದಿನಗಳಲ್ಲಿ ತಮ್ಮ ಮತದಾರರಿಗೆ ಲಸಿಕೆಯನ್ನು ಕೊಟ್ಟಿದ್ದರ ಕುರಿತು ಹೇಳಿಕೆಯನ್ನು ನೀಡುವಂತಾದರೆ ಕೊರೊನಾ ನಿರ್ಮೂಲನೆ ಮಾಡಬಹುದಾಗಿದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ, ಹಿರಿಯ ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿನದತ್ತ ದೇಸಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂಗ್ಲAಡದಲ್ಲಿ ಕೊರೊನಾ ಹಿಡಿತದಲ್ಲಿ ಬರಲು ಎಲ್ಲರಿಗೂ ಲಸಿಕೆಯನ್ನು ಕೊಡಿಸಲಾಯಿತು. ಲಸಿಕೆ ಕೊಡಿಸುವುದೊಂದೆ ಕೊರೊನಾ ನಿರ್ಮೂಲನೆಯ ಸರಳ ಮಾರ್ಗವಾಗಿದೆ. ಕೊರೊನಾ ಬಂದ ನಂತರ ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ, ಆಕ್ಸಿಜನ್ ಸಿಗಲಿಲ್ಲ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುವ ಬದಲು ಬಾರದಂತೆ ತಡೆಗಟ್ಟುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ. ಇದಕ್ಕೆ ಲಸಿಕೆಯೊಂದೇ ಮದ್ದಾಗಿದ್ದು ನಗರ ಅಲ್ಲದೇ ಹಳ್ಳಿ ಹಳ್ಳಿಗಳ ಪ್ರತಿಯೊಬ್ಬರ ಮನೆಗೂ ಹೋಗಿ ಲಸಿಕೆಯನ್ನು ಕೊಡುವಂತಾಗಬೇಕು. ಈ ಜವಾಬ್ಧಾರಿಯನ್ನು ಶಾಸಕರು ವಹಿಸಿಕೊಂಡಾಗ ಮಾತ್ರ ಈ ಕರ‍್ಯ ಯಶಸ್ವಿಯಾಗಲು ಸಾಧ್ಯ.
ಹೆಚ್ಚಿನ ಶಾಸಕರು ಕೊರೊನಾ ಕುರಿತಂತೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ. ಅದು ತಮ್ಮ ಸಮಸ್ಯೆಯೇ ಅಲ್ಲವೇನೋ ಅನ್ನುವ ತರಹ ವರ್ತಿಸುತ್ತಿದ್ದಾರೆ. ಲಸಿಕೆ ಜವಾಬ್ದಾರಿಯನ್ನು ಜವಾಬ್ದಾರಿಯನ್ನು ಶಾಸಕರು ಹೊತ್ತುಕೊಂಡಲ್ಲಿ ಹೆಚ್ಚು ಹೆಚ್ಚು ಜನರಿಗೆ ಲಸಿಕೆಯನ್ನು ನೀಡುವುದರ ಮೂಲಕ ಕೊರೋನಾ ನಿರ್ಮೂಲನ ಮಾಡಬಹುದಾಗಿದೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ, ಹಿರಿಯ ಕವಿ ಡಾ. ಜಿನದತ್ತ ದೇಸಾಯಿಯವರು ಅಭಿಪ್ರಾಯ ಪಟ್ಟರು.


Leave a Reply