Gadag

ಮೊಹಮ್ಮದ್ ಮೊಹಸಿನ್ ಗದಗ ಜಿ.ಪಂ. ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ


ಗದಗ  ಮೇ 7 :  ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 159 ಮತ್ತು 160 ರಡಿ 2016-2021 ರ ಅವಧಿಗೆ ರಚನೆಯಾಗಿದ್ದ ಗದಗ ಜಿಲ್ಲಾ ಪಂಚಾಯತ್ ಆಡಳಿತ ಅವದಿಯು 2021 ರ ಮೇ ತಿಂಗಳ 2 ನೇ ದಿನಾಂಕಕ್ಕೆ ಮುಕ್ತಾಯಗೊಂಡಿದೆ.  ಈ ಹಿನ್ನೆಲೆಯಲ್ಲಿ ಅವಧಿ ಮುಕ್ತಾಯುವಾಗುವ ಮರುದಿನದ ದಿನಾಂಕದಿAದ ಜಾರಿಗೆ ಬರುವಂತೆ  ಗದಗ ಜಿಲ್ಲಾ ಪಂಚಾಯತ್‌ಗೆ   ಸಂಬAಧಪಟ್ಟ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದ್ದರಿಂದ  ಪುನರ್ವಸತಿ ಮತ್ತು ಪುನರ್ ನಿರ್ಮಾಣ ರಾಜ್ಯ  ಆಯುಕ್ತರು ಹಾಗೂ ಕಂದಾಯ ಇಲಾಖೆ  ಕಾರ್ಯದರ್ಶಿಗಳು  ಮತ್ತು ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ್ ಅವರು  ಗದಗ ಜಿಲ್ಲಾ ಪಂಚಾಯತಿಯ ಆಡಳಿತಾದಿಕಾರಿಯ ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ ಎಂದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply