Gadag

ಮಕ್ಕಳ ಆಪ್ತ ಸಮಾಲೋಚನೆಗೆ ಟೆಲಿ ಕೌನ್ಸೆಲಿಂಗ್


ಗದಗ  7 : ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ರವರು ಕೋವಿಡ್-19 2ನೇ ಅಲೆಯ ಸೋಂಕಿನಿಂದಾಗಿ ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಸೋಂಕಿಗೆ ತುತ್ತಾಗುತ್ತಿರುವ ಕಾರಣ ಅಂತಹ ಕುಟುಂಬಗಳ ಮಕ್ಕಳು ಕುಟುಂಬದಿಂದ ದೂರವಿರಬೇಕಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಎದುರಾಗುವ ಸಾಧ್ಯತೆಯಿದೆ ಹಾಗೂ ನಿರ್ಲಕ್ಷತೆಗೊಳ್ಳಗಾದ ಪರಿತ್ಯಜಿಸಲ್ಪಟ್ಟ, ಒಪ್ಪಿಸಲ್ಪಟ್ಟ, ದೌರ್ಜನ್ಯಕ್ಕೆ ಒಳಗಾದ, ಶೋಷಣೆಗೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳ ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ಮಕ್ಕಳು ಮತ್ತು ಪೋಷಕರು ಸಹ ಆಪ್ತ ಸಮಾಲೋಚನೆ ಬಯಸುವವರು ಸಮಯ ಬೆಳಿಗ್ಗೆ 08:00 ರಿಂದ ರಾತ್ರಿ 08:00 ರವರೆಗೆ “ಟೆಲಿ-ಕೌನ್ಸ್‍ಲಿಂಗ್” ಟ್ರೋಲ್ ಫ್ರೀ ಸಂಖ್ಯೆ: 14499 ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ 1098 ಮತ್ತು ಕರ್ನಾಟಕ ರಾಜ್ಯ ಮಕ್ಕಳ  ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರ ಟೋಲ್ ಫ್ರೀ ಸಂಖ್ಯೆ: 080-47181177 ಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗದಗ ಕಚೇರಿಯ ಸಂ: 08372-250758 ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶ್ರೀ ಅವಿನಾಶಲಿಂಗ ಗೋಟಖಿಂಡಿ, (9448837228), ಅನುಪಮಾ ಹಿರೇಗೌಡರ, ರಕ್ಷಣಾಧಿಕಾರಿ (ಸಾಂಸ್ಥಿಕ) (9148866264), ರಮೇಶ ಕಳ್ಳಿಮನಿ, ರಕ್ಷಣಾಧಿಕಾರಿ (ಅಸಾಂಸ್ಥಿಕ) (7829301867), ಸವಿತಾ ನಿಂ ಹರ್ತಿ, ಆಪ್ತಸಮಾಲೋಚಕರು (8197916808) ಮಕ್ಕಳ ರಕ್ಷಣೆಗೆ ಕರೆ ಮಾಡುವ ಮೂಲಕ ಮಕ್ಕಳಿಗೆ ಉಚಿತವಾಗಿ ಆಪ್ತಸಮಾಲೋಚನೆ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗದಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply