Gadag

ತಾತ್ಲಾಲಿಕ ನೇಮಕಾತಿ ಮಾಡಿಕೊಳ್ಳಲು  ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ


ಗದಗ  ಮೇ 7:  ಕೋವಿಡ್-19 ಸಾಂಕ್ರಾಮಿಕ ರೋಗದ ನಿರ್ವಹಣೆಗೆ ತಾಲೂಕಾ ಆಸ್ಪತ್ರೆಗಳಲ್ಲಿರುವ ಐಸಿಯು ಗಳನ್ನು ಕಾರ್ಯಗತಗೊಳಿಸಿ, ನಿರ್ವಹಿಸಲು ಗದಗ ಜಿಲ್ಲೆಯ ತಾಲೂಕಾ ಆಸ್ಪತ್ರೆ ರೋಣ, ಮುಂಡರಗಿ, ನರಗುಂದ ಹಾಗೂ ಶಿರಹಟ್ಟಿಗಳಿಗೆ ತಲಾ 3 ರಂತೆ ಒಟ್ಟು 12 ಜನ ಎಮ್‌ಬಿಬಿಎಸ್ ವೈದ್ಯಾಧಿಕಾರಿಗಳನ್ನು 6 ತಿಂಗಳ ಮಟ್ಟಿಗೆ, ಮಾಸಿಕ ವೇತನ ರೂ. 60000/- ನಿಗಧಿಪಡಿಸಿ, ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಕರೆಯಲಾಗಿದೆ. ಆಸಕ್ತರು ನಿಗಧಿತ ಅರ್ಜಿ ನಮೂನೆಯೊಂದಿಗೆ ವಿದ್ಯಾರ್ಹತೆ, ಹಾಗೂ ಇತರೆ ಅಗತ್ಯ ಮೂಲ ದಾಖಲೆಗಳೊಂದಿಗೆ ಪ್ರತಿದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply