BengalurukaranatakaState

ಮೇ.25ರ ವರೆಗೆ ಕರುನಾಡಕ್ಕೆ ಬಿತ್ತು ಬೀಗ


ಬೆಂಗಳೂರು ರಾಜ್ಯಾಧ್ಯಂತ ಮೇ.10ರಿಂದ ಮೇ.25ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗುತ್ತಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು  ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಅತ್ಯಂತ ಪರಿಣಾಮವಾಗಿದೆ, ಇದನ್ನು ನಿಯಂತ್ರಿಸಲು ವಿಧಿಸಲಾಗಿದ್ದಂತ ಕೊರೋನಾ ಕರ್ಪ್ಯೂ ಹೆಚ್ಚು ಪರಿಣಾಮಕಾರಿ ಆಗಿಲ್ಲ. ಹೀಗಾಗಿ ದಿನಾಂಕ 10-05-2021ರ ಬೆಳಿಗ್ಗೆ 6 ಗಂಟೆಯವರೆ 24-05-2021ರವರೆಗೆ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿ, ಬಾರ್, ಹೋಟೆಲ್, ಪಬ್ ನಿರ್ಬಂಧಿಸಲಾಗಿದೆ ಎಂದರು.

ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳೋ ಗಾಡಿಯಲ್ಲಿ ಕೂಡ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಹೋಗದೋದಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಕೊಂಡೊಯ್ಯೋದಕ್ಕೆ ಅವಕಾಶ ನೀಡಲಾಗಿದೆ ಎಂದರು.

ಲಾಕ್ ಡೌನ್ ಪ್ರಮುಖ ಅಂಶಗಳು:

ಲಾಕ್ ಡೌನ್  ಮಾಡಿ ರಾಜ್ಯ ಸರ್ಕಾರ ಆದೇಶ

ಮೇ 10 ರಿಂದ ಲಾಕ್ ಡೌನ್  ಮಾಡಿ ರಾಜ್ಯ ಸರ್ಕಾರ ಆದೇಶ

ಮೇ 10 ರಿಂದ 24 ರ ವರೆಗೆ ಲಾಕ್ ಡೌನ್  ಮಾಡಿದ  ರಾಜ್ಯ ಸರ್ಕಾರ

ಹೊಟೇಲ್ ,ಪಬ್,ಬಾರ್ ಸಂಪೂರ್ಣ ಬಂದ್ ಮಾಡಿ ಆದೇಶ

ಅಗತ್ಯ ಸೇವೆಗಳನ್ನ ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್..ಬಂದ್

ಬೆಳಗ್ಗೆ 6 ರಿಂದ 10 ಗಂಟೆವರೆಗೂ ಮಾತ್ರ ಅಗತ್ಯಸೇವೆ ಖರೀದಿಗೆ ಅವಕಾಶ..!

ಅಂತರ್ ಜಿಲ್ಲಾ, ಅಂತರಾಜ್ಯ ಸಂಚಾರಕ್ಕೆ ನಿರ್ಭಂಧ ಹೇರಿದ ರಾಜ್ಯ ಸರ್ಕಾರ

ರಾಜ್ಯಾಧ್ಯಂತ ಸಭೆ,ಸಮಾರಂಭಗಳಿಗೆ ಸರ್ಕಾರ ಬ್ರೇಕ್

ಮದುವೆ, ಜಾತ್ರೆ ಮೊದಲಾದವುಗಳಿಗೂ ನಿರ್ಬಂಧ

ಮದುವೆಗೆ 50 ಜನರಿಗೆ ಮಾತ್ರ ಅವಕಾಶ

ಹೊಟೇಲ್ ಪಾರ್ಸೆಲ್ ಗೆ ಮಾತ್ರ ಅವಕಾಶ


Leave a Reply