Belagavi

ಬಿಮ್ಸ್ ಆವರಣದಲ್ಲಿ ಕೋವೀಡ್ ಸೋಂಕಿತ ಬಾಣಂತಿಯ ನರಳಾಟ, ಬೆಡ್ ಇಲ್ಲಾ, ಚಿಕಿತ್ಸೆಯೂ ಇಲ್ಲಾ


ಬೆಳಗಾವಿ: ಕೊರೋನಾ ಕರುಣೆಯೇ ಇಲ್ಲದೇ ತನ್ನ ಕರಾಳ ರೂಪವನ್ನುತೋರುತ್ತಿದೆ. ಮನಕುಲದ ನೆಮ್ಮದಿ, ಸಂಬಂಧ, ಭಾವನೆಗಳನ್ನೇ ಕಿತ್ತುಕೊಂಡ ಕೋವಿಡ್ ಈಗ ಕುಂದಾನಗರಿಯನ್ನು ಬೆಂಗಳೂರಿನ ಪರಿಸ್ಥಿತಿಗೆ  ತಂದಿಟ್ಟಿದ್ದು. ರೋಗಿಗಳು ಆಸ್ಪತ್ರೆಗಳಲ್ಲಿ ಬೆಡ್ ಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು. ಜಿಲ್ಲಾಸ್ಪತ್ರೆಯ ಎದುರು 13 ದಿನದ ಸೋಂಕಿತ ಬಾಣಂತಿಯೊಬ್ಬಳು ಬೆಡ್ ಇಲ್ಲದೇ ನರಳಾಡಿದ ಘಟನೆ ಕಂಡು ಬಂದಿದ್ದು ನೋಡುಗರ ಕರುಳೆ ಕಿತ್ತು ಬರುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಡ್ ಇಲ್ಲಾ, ಆಕ್ಸಿಜೆನ್ ಇಲ್ಲಾ ಎಂಬ ಕೂಗು ನರಳಾಟ, ಪ್ರಾಣ ಸಂಕಟಗಳು ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ಕಾಣುತ್ತಿದ್ದವು. ಆದರೆ ಇಂತಹದ್ದೇ ಪರಿಸ್ಥಿತಿ ಈಗ ಗಡಜಿಲ್ಲೆ ಬೆಳಗಾವಿಯಲ್ಲೂ ನಿರ್ಮಾಣವಾಗಿದ್ದು ಬಾಣಂತಿಯೊಬ್ಬಳ ನರಳಾಟವೇ ಅದಕ್ಕೆ ಪ್ರತ್ಯಕ್ಷ ಸಾಕ್ಷಯಾಗಿದೆ.

ರಾಮದುರ್ಗ ತಾಲೂಕಿನ ರಂಕನಕೊಪ್ಪ ಗ್ರಾಮದ ಮಾಯವ್ವ ಎಂಬ ಬಾಣಂತಿಗೆ  ಕರುಳು ವಾವಿನ ಜೊತೆಗೆ ಕೋವಿಡ್ ಲಕ್ಷಣಗಳು ಕೂಡಾ ಕಂಡು ಬಂದಿದ್ದವು ಇದರಿಂದ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಬೆಡ್ ಸಿಗದೆ, ಮಹಿಳೆಯೊಂದಿಗೆ ಕುಟುಂಬಸ್ಥರು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆ ಎದುರು ಬೆಡ್ ಸಿಗದಢ ಸೋಂಕಿತರ ನರಳಾಟ ಜತೆಗೆ ಬೆಡ್ ಸಿಗದೇ  ಆ್ಯಂಬುಲೆನ್ಸ್‌ನಲ್ಲೇ ೧೩ ದಿನದ ಬಾಣಂತಿ  ನರಳಿ ನರಳಿ ಬೆಡ್ ಗಾಗಿ ಅಂಗಲಾಚುತ್ತಿದ್ದರೂ ಜಿಲ್ಲಾಡಳಿತ ಮತ್ತು ಇತರ ಸಂಘಟನೆಗಳು ಅತ್ತ ತಿರುಗಿ ನೋಡಿಲ್ಲ, ಬಂದು ಎರಡು ಗಂಟೆಯಾದರೂ ಯಾವೊಬ್ಬ ವೈದ್ಯನೂ ಬಂದು ವಿಚಾರಿಸಿಲ್ಲ ಎಂದು ಬಾಣಂತಿಯ ತಂದೆ, ತಾಯಿ ಅಳಲು ತೋಡಿಕೊಳ್ಳುತ್ತಿದ್ದಾರೆ.

 


Leave a Reply