vijayapur

ಸಿಡಿಲು ಬಡಿದು ಎರಡು ಎತ್ತುಗಳು ಸಾವು


ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ ಶುಕ್ರವಾರ ಮದ್ಯಾಹ್ನ ಗುಡುಗು ಸಹಿತ ಸಿಡಿಲು ಬಡಿದು ಆಳೂರ ಗ್ರಾಮದ ತೋಟದ ವಸ್ತಿಯಲ್ಲಿ ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ಆಳೂರ ಗ್ರಾಮದ ಬಾಳಪ್ಪ ಸೊಮನಿಂಗ ನಾಟಿಕಾರ ಎಂಬ ರೈತನಿಗೆ ಸೇರಿದ ಎರಡು ಎತ್ತುಗಳಾಗಿದ್ದು ಮರದ ಕೆಳಗೆ ಕಟ್ಟಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು ಎರಡು ಎತ್ತುಗಳು ಸಾವನ್ನಪ್ಪಿವೆ ಅಂದಾಜು 1.50 ಲಕ್ಷ ರೂ ಕಿಮ್ಮತ್ತಿನ ಎತ್ತುಗಳು ಸಾವನ್ನಪ್ಪಿವೆ ಇಂಡಿ ಗ್ರಾಮೀಣ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Leave a Reply