Belagavi

ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ: ಕೊರೋನಾ ಕಟ್ಟಿ ಹಾಕಲು ಅಧಿಕಾರಿಗಳಿಂದ ಸಭೆ


ಗೋಕಾಕ: ದಿನ ದಿನಕ್ಕೆ ದೇಶಾದ್ಯಾಂತ ಕೊರಾನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದರಂತೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿಯೂ ಹೆಚ್ಚಾಗುತ್ತಿದ್ದರಿಂದ ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ನೇತೃತ್ವದಲ್ಲಿ ಗೋಕಾಕದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ  ಮಾತನಾಡಿದ ರಮೇಶ ಜಾರಕೊಹೋಳಿಯವರು ಗೋಕಾಕದಲ್ಲಿ ಕೊರೊನಾ ನಿಯಂತ್ರಣ ಮಾಡಲು ಸರಕಾರದ ಜೊತೆಯಲ್ಲಿ ಎಲ್ಲ ಇಲಾಖೆಗೆ ಸಹಕಾರ ನೀಡುತ್ತಾ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಮಾದ್ಯದವರಿಗೆ ಅವರು ನಮ್ಮ ಸರಕಾರ ಅಷ್ಟೆ ಅಲ್ಲದೆ ವೀರೋದ ಪಕ್ಷದದವ ಸಲಹೆ ಪಡೆದುಕೊಂಡು ಮಾಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಎಲ್ಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ ಹಾಗೂ ಇನ್ನೂ 15 ದಿನಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಸರಕಾರ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿಕೊಂಡಿದೆ.

ಇನ್ನೂ ಸೋಮವಾರದಿಂದ ಇರುವ ಲಾಕಡೌನ್ ಅನ್ನು ಹೋದ ಬಾರಿಗಿಂತ ಈ ಬಾರಿ ಮತ್ತಷ್ಟು ಕಠಿಣವಾಗಿ ಪರಿಗಣಿಸಿ   ಜನರು ಅನಗತ್ಯವಾಗಿ ಹೊರಗೆ ಬರದಂತೆ ನೋಡಿಕೊಂಡು ಕೊರೊನಾ ಹರಡುತ್ತಿರುವ ಚೈನ್ ಬ್ಲಾಕ ಮಾಡಲು ಕಟ್ಟು ನಿಟ್ಟಿನ ಕ್ರಮಕೈಗೊಳ್ಳುತ್ತೇವೆ ಎಂದರು,

ಕೊರೊನಾ ಅದೇನು‌ ಮಹಾ ರೋಗವಲ್ಲ ಎಲ್ಲರೂ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಮನೆಯಲ್ಲಿಯೆ ಇದ್ದರೆ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಅದಕ್ಕಾಗಿ ಎಲ್ಲರೂ ಮನೆಯಲ್ಲಿಯೇ ಇರಲು ತಿಳಿಸಿದರು


Leave a Reply