Belagavi

ಬೆಳಗಾವಿ :ವಿಧಾನ ಪರಿಷತ್ ಸದಸ್ಯರಾಗಬೇಕೆ ಹಾಗಾದರೆ ಇಲ್ಲಿ ಅರ್ಜಿ ಸಲ್ಲಿಸಿ


2022ರ ಜೂನ್ ನಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್  ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ವಾಯವ್ಯ ಕ್ಷೇತ್ರಗಳಾಗಿವೆ. ಆಕಾಂಕ್ಷಿಗಳು ಪರಿಚಯ ಪತ್ರ ಪೋಟೊ ಸಹಿತ ಬೆಳಗಾವಿಯ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರ ಕಚೇರಿಯಲ್ಲಿ ಸಲ್ಲಿಸಲು ತಿಳಿಸಲಾಗಿದೆ.

ಜುಲೈ 2022 ರಲ್ಲಿ ಹಾಲಿ ಸದಸ್ಯರು ನಿವೃತ್ತರಾಗಲಿದ್ದು  2022ರ ಜೂನ್ ನಲ್ಲಿ ಚುನಾವಣೆ ನಡೆಯಲಿದೆ. ಆಸಕ್ತರು ಇದೇ ಮೇ 12 ರೊಳಗೆ ಅರ್ಜಿ ಸಲ್ಲಿಸಲು ವಿನಯ ನಾವಲಗಟ್ಟಿ ತಿಳಿಸಿದ್ದಾರೆ.


Leave a Reply