Belagavi

ಬೆಳಗಾವಿ ಜನರ ಬೇಜವಾಬ್ದಾರಿ: ಜನರಿಂದ ತುಂಬಿತುಳುಕುತ್ತಿರುವ ಮಾರುಕಟ್ಟೆ ಗಳು


ಬೆಳಗಾವಿ: ನಾಳೆಯಿಂದ ಲಾಕ್ ಡೌನ್ ಜಾರಿಯಾಗುತ್ತಿರುವ ಬೆನ್ನಲ್ಲೇ ಇಂದು ಬೆಳಗಾವಿ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿದ್ದು, ಕೊರೋನಾ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮೈಮರೆತು ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.

ಕೋವಿಡ್ ಎರಡನೇ ಅಲೆ ಭಯಾನಕವಾಗಿದೆ ಎಚ್ಚರದಿಂದಿರಿ, ನಿಯಮಗಳನ್ನ ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರಕಾರ ಮತ್ತು ಜಿಲ್ಲಾಡಳಿತಗಳು ಕೂಗಿ ಕೂಗಿ ಹೇಳಿದರು ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎನ್ನುವಂತಿತ್ತು ಇಂದಿನ ಬೆಳಗಾವಿ ಮಾರುಕಟ್ಟೆಗಳು.

ನಗರದ ಖಡೆಬಜಾರ್, ಮಾರುತಿಗಲ್ಲಿ, ರವಿವಾರ ಪೇಟೆ, ಬೆಂಡಿ ಬಜಾರ್ ಸೇರಿದಂತೆ ವಿವಿದೆಡೆ ತರಕಾರಿ ವಿವಿಧ ಸಾಮಗ್ರಿಗಳನ್ನು ಖರೀದಿಸಲು ಜನ ಮುಗಿ ಬಿದ್ದಿದ್ದು ಸಾಮಾಜಿಕ ಅಂತರವನ್ನು ಮರೆತು ಖರೀದಿಗೆ ಇಳಿದಿದ್ದಾರೆ.

ನಾಳೆಯಿಂದ ಮೇ.24ರ ವರೆಗೆ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನಜಂಗುಭಿ ಹೆಚ್ಚಾಗಿದೆ. ಪ್ರತಿದಿನ ಬೆ.6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಲಾಗಿದೆಯಾದರೂ ಇಂದು ಮಾರುಕಟ್ಟೆಗಳು ಪುಲ್ ರಷ್ ಆಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಒಂದು ಸಾವಿರ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದು ಬೆಡ್ ಸಿಗದೇ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದರು ಜನರ ಬೇಜವಾಬ್ದಾರಿ ಮಾತ್ರ ಕಡಿಮೆಯಾಗಿಲ್ಲ ಹೀಗೆ ಮುಂದುವರೆದರೆ ಇನ್ನೂ ಕಠಿಣ ಪರಿಸ್ಥಿತಿಯ ದಿನಗಳನ್ನು ಎದುರಿಸು ಪರಿಸ್ಥಿತಿ ನಿರ್ಮಾಣವಾಗುತ್ತದೆ.


Leave a Reply