Belagavi

ಜನತಾ ಕರ್ಫ್ಯೂಗೆ ಚಿಕ್ಕೋಡಿಯಲ್ಲಿ ಡೋಂಟ್ ಕೇರ್, ಅಗತ್ಯ ವಸ್ತು ಖರೀದಿಗೆ ಮುಗಿ ಬಿದ್ದ ಜನ


ಚಿಕ್ಕೋಡಿ: ಜನತಾ ಕರ್ಫ್ಯೂಗೆ  ಚಿಕ್ಕೋಡಿ ಯ ಜನ ಡೋಂಟ ಕೇರ್ ಎನ್ನುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬೀಳುವ ಮೂಲಕ ಕೊರೊನಾ ರೂಲ್ಸ್ಗಳನ್ನು ಬ್ರೇಕ್ ಮಾಡಿರುವ ಘಟನೆ ಕಂಡು ಬಂತು.

ಚಿಕ್ಕೋಡಿ ಯ ಪ್ರಮುಖ ಮಾರ್ಕೆಟ್ ಏರಿಯಾಗಳಾದ   ದಂಬಾಳ್ ಕೋಟ ಗಾಂಧಿ ಮಾರ್ಕೆಟ್ ಕೆಸಿ ರಸ್ತೆ ಸೇರಿ ಮುಂತಾದ ಕಡೆಗಳಲ್ಲಿ  ಹಣ್ಣು, ತರಕಾರಿ ಸೇರಿ ದಿನಸಿ ವಸ್ತುಗಳ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಈ ವೇಳೆ ಯಾವುದೇ ರೀತಿ ಸಾಮಾಜಿಕ ಅಂತರ ಕಂಡು ಬಂದಿಲ್ಲ. ಜನ ಗುಂಪು ಗುಂಪಾಗಿ ಓಡಾಡುವ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಜನ ಮಾತ್ರ ಸಿಕ್ಕಿತ್ತೊ ಸಿಗಲಿಲ್ಲವೋ ಎನ್ನುವಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಇನ್ನು ಈ ವೇಳೆ ಚಿಕ್ಕ ಮಕ್ಕಳನ್ನು ಕೂಡ ಕೆಲ ಪೋಷಕರು ಮಾರ್ಕೆಟ್‌ಗೆ ಕರೆದುಕೊಂಡು ಬಂದಿದ್ದಾರೆ. ಮೊದಲೇ ಚಿಕ್ಕ ಮಕ್ಕಳಿಗೆ ಕೊರೊನಾ ಬಹು ಬೇಗನೇ ತಗುಲುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಜನರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ


Leave a Reply