Belagavi

ಬೆಳಗಾವಿ ಜಿಲ್ಲಾಧಿಕಾರಿಯಾಗಿ ವಾಪಸ್ಸಾದ ಎಂ.ಜಿ ಹಿರೇಮಠ


ಬೆಳಗಾವಿ: ಚುನಾವಣೆ ನಿಮಿತ್ತ ವರ್ಗಾವಣೆಯಾಗಿದ್ದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮತ್ತೆ ಬೆಳಗಾವಿಗೆ ವಾಪಸ್ ಆಗಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.

ಚುನಾವಣೆ ವೇಳೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಹರೀಶ್ ಕುಮಾರ ತಮ್ಮ ಮೂಲ ಹುದ್ದೆ ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ಸಂಸ್ಥೆಗೆ ವಾಪಸ್ಸಾಗಿದ್ದಾರೆ.

ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲೆಯವರಾಗಿರುವುದರಿಂದ ಚುನಾವಣೆ ಕಾಲಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ ಬೆಳಗಾವಿಗೆ ವಾಪಸ್ಸಾಗಿದ್ದು ಮೊದಲಿನಂತೆಯೇ ಅಧಿಕಾರ ವಹಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ.

 


Leave a Reply