Gadag

ಲಾಕ್ಡೌನ್ ಅಸ್ತ್ರ ಪ್ರಯೋಗ ; ಅಂಗಡಿ ಮಾಲಿಕರನ್ನ ವಶಕ್ಕೆ


ಗದಗ: ರಾಜ್ಯಾದ್ಯಂತ ಕೊರೊನಾ ಮಹಾಮಾರಿ ಮೀತಿಮರುತ್ತಿದೆ. ಹೀಗಾಗಿ ಸರ್ಕಾರ ಲಾಕ್ಡೌನ್ ಅಸ್ತ್ರ ಪ್ರಯೋಗ ಮಾಡಿದ್ರು. ಇನ್ನು ನಾಳೆಯಿಂದ ಲಾಕ್ಡೌನ್ ಜೊತೆಗೆ ಕೊರೊನಾ ಟೈಟ್ ರೂಲ್ಸ್ ಶುರುವಾಗಲಿದೆ. ಇಂತಹದ್ರಲ್ಲಿ ಗದಗನಲ್ಲಿ ಓರ್ವ ಬಟ್ಟೆ ಅಂಗಡಿ ಮಾಲೀಕ ತನ್ನ ಬಟ್ಟೆ ಶಾಪ್ ಓಪನ್ ಮಾಡಿ ಗ್ರಾಹಕರಿಗೆ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ನಗರದ ಧನಲಕ್ಷ್ಮಿ ಜವಳಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಅಂಗಡಿ ಒಳಗೆ ಹಲವಾರು ಗ್ರಾಹಕರನ್ನು ಕರೆದುಕೊಂಡು ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ. ಕೋವಿಡ್ ನಿಯಮ ಗಾಳಿಗೆ ತೂರಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಹರ ಪೊಲಿಸರು ಸ್ಥಳಕ್ಕೆ ಎಂಟ್ರಿ ಕೊಟ್ಟು ಅಂಗಡಿ ಮಾಲಿಕರನ್ನ ವಶಕ್ಕೆ iಪಡೆದಿದ್ದಾರೆ. ಧನಲಕ್ಷ್ಮೀ ಬಟ್ಟೆ ಅಂಗಡಿಯನ್ನು ಸೀಜ್ ಮಾಡಲಾಗಿದೆ. ಅಂಗಡಿ ಮಾಲೀಕರಿಗೆ ವ್ಯಾಪಾರ ಆದ್ರೆ ಸಾಕು ಉಳಿದವರಿಗೆ ಏನಾದರೂ ನಮ್ಗೆ ಏನ್ನು ಎನ್ನುವ ವರ್ತನೆ ತೋರುತ್ತಿದ್ದಾರೆ ಅನ್ಸೂತೆ. ಮದುವೆಗೆ ಜನ್ರು ಜವಳಿ ಹಾಕ ತಂಡೋಪ ತಂಡವಾಗಿ ಬಂದು ಬಟ್ಟೆ ಖದೀರಿಯಲ್ಲಿ ಬ್ಯೂಸಿಯಾಗಿದ್ರು. ಗದಗ ಶಹರ ಪೋಲಿಸ್ ರಿಗೆ ಮಾಹಿತಿ ಬಂದ ತಕ್ಷಣ ಎಂಟ್ರಿಕೊಟ್ಟು ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊರೋನಾ ನಿಯಮಗಳಿಗೆ ಡೋಂಟ್ ಕೇರ್ ಎನ್ನುತ್ತಿರುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲ ಬೇಕು ಎನ್ನುವುದು ಪ್ರಜ್ಞೆವಂತಹ ಜನ್ರ ಆಗ್ರಹಿಸಿದ್ದಾರೆ.


Leave a Reply