Belagavi

ಗ್ರಾ.ಪಂ ಅಧ್ಯಕ್ಷರಿಗೆ ಇರುವಷ್ಟು ಸ್ವತಂತ್ರವನ್ನು ಜಿ.ಪಂ ಅಧ್ಯಕ್ಷರಿಗೆ ನೀಡಿ: ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ


ಬೆಳಗಾವಿ: ಜಿ.ಪಂಗಳಿಗೆ ಟಾಸ್ಕ್ ಪೋರ್ಸ ಮಾದರಿಯಲ್ಲಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಅಧ್ಯಕ್ಷರುಗಳಿಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಬೇಕು ಇದರಿಂದ ಜಿಲ್ಲಾಮಟ್ಟದಲ್ಲಿ ಮತ್ತಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಜಿ.ಪಂ ಅಧ್ಯಕ್ಷೆ ಆಶಾ ಪ್ರಶಾಂತರಾವ್ ಐಹೊಳೆ ಅವರು ಹೇಳಿದರು.

ಸೋಮವಾರ ಜಿ.ಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿ.ಪಂ ಅಧ್ಯಕ್ಷೆ ಅಧಿಕಾರವದಿಗೆ ಇಂದಿಗೆ ಐದು ವರ್ಷಗಳು ಸಂಪೂರ್ಣಗೊಂಡಿದೆ. ಇಲ್ಲಿಯವರೆಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಿರುವ ಆತ್ಮತೃಪ್ತಿ ನನಗಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಜಿ.ಪಂಗೆ ಬಿಡುಗಡೆಯಾದ ರೂ. 3249.36 ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ. ಎನ್.ಆರ್.ಡಿ.ಡಬ್ಲ್ಯು. ಎಫ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಿದ್ದೇವೆ ಎಂದರು.

ಉಗಾರ ಬಿಕೆ ಜಿ.ಪಂ ಮತಕ್ಷೇತ್ರದಲ್ಲಿ 76.48 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಿದ್ದು, ಆಶಾ ಕಿರಣ ಎಂಬ ಕಾರ್ಯಕ್ರಮದಡಿ 50ಕ್ಕೂ ಹೆಚ್ಚು ಮಕ್ಕಳನ್ನು ಶೈಕ್ಷಣಿಕ ದತ್ತು ತೆಗೆದುಕೊಂಡು ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.

ಇನ್ನು ಅಧಿಕಾರಿಗಳು ಸಹಕಾರದ ಕುರಿತು ಪ್ರತಿಕ್ರಿಯಿಸಿ ಅಧಿಕಾರದಲ್ಲಿ ಮನಸ್ಥಾಪ, ಕೆಲಸದ ಒತ್ತಡ, ಅಡೆತಡೆಗಳು ಸಾಮಾನ್ಯವಾಗಿರುತ್ತವೆ ಇಂತಹ ಸಂದರ್ಭಗಳನ್ನು ನಾವೆಲ್ಲರೂ ಸೇರಿ ನಿಭಾಯಿಸಿದ್ದೇವೆ ಎಂದರು.

ಜಿ.ಪಂನ ಎಲ್ಲ ಅಧಿಕಾರವು ಸಿಇಓ ಆಡಳಿತ ವ್ಯಾಪ್ತಿಗೆ ಕೇಂದ್ರಿಕರಿಸಲ್ಪಟ್ಟಿದೆ ಇದರಿಂದ ಅಧ್ಯಕ್ಷರು ಸ್ವಾತಂತ್ರವಾಗಿ ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ಗ್ರಾ.ಪಂ ಅಧ್ಯಕ್ಷರಿಗೆ ಇರುವಷ್ಟಾದರೂ ಸ್ವತಂತ್ರವನ್ನು ಜಿ.ಪಂ ಅಧ್ಯಕ್ಷರಿಗೆ ನೀಡಬೇಕು ಅಂದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಎಲ್ಲ ಸದಸ್ಯರುಳನ್ನು, ಸಿಬ್ಬಂದಿ ವರ್ಗವನ್ನು ಸಮಾನತೆಯಿಂದ ಕಾಣುತ್ತ ಸಮರ್ಪಕವಾಗಿ ಐದು ವರ್ಷದ ಅಧಿಕಾರವದಿಯನ್ನು ನಿಭಾಯಿಸಿದ್ದೇನೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


Leave a Reply