Belagavi

ಜಿಲ್ಲಾಧಿಕಾರಿಗಳ ಜೊತೆ ಕೋವಿಡ್ ಚರ್ಚೆ ನಡೆಸಿದ ಜಿಲ್ಲಾ ಕಾಂಗ್ರೆಸ್ ನಾಯಕರು


ಬೆಳಗಾವಿ: ಜಿಲ್ಲೆಯಲ್ಲಿ ಕರೋನಾ ಅಟ್ಟಹಾಸ ಹೆಚ್ಚುತ್ತಲೇ ಇದ್ದು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಮತ್ತೊಂದೆಡೆ ಬೆಡ್ ಮತ್ತು ಆಕ್ಸಿಜೆನ್ ಗಳ ಕೊರತೆ ಹೆಚ್ಚುತ್ತಿರುವುದರಿಂದ ಜಿಲ್ಲಾ ಕಾಂಗ್ರೆಸ್ ನಾಯಕರು  ಜಿಲ್ಲಾಧಿಕಾರಿಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು

ನಗರದ ಜಿಲ್ಲಾಧಿಕಾರಿ ಕಚೇರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್,ಡಾ. ಅಂಜಲಿ ಲಿಂಬಾಳಕರ್, ಜಿ.ಪಂ ಅಧ್ಯಕ್ಷೆ ಆಶಾ ಐಹೋಳೆ ಅವರು ಭೇಟಿ ನೀಡಿ,  ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಕೋವಿಡ್ ಸೋಂಕಿತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು. ಅಲ್ಲದೆ ರೆಮಡಿಸಿವರ್ ಲಸಿಕೆ‌ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಅದನ್ನು ಸರಿಯಾಗಿ ನೀಡುವಂತೆ ಆಗ್ರಹಿಸಿದರು.

ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕೋವ್ಯಾಕ್ಸಿನ್ ಲಸಿಕೆ ಯಾವಾಗ ಮಾಡುತ್ತಿರಾ? ಎಷ್ಟು ತಾಲೂಕಿಗೆ ಎಷ್ಟು ಸಂಖ್ಯೆಯಲ್ಲಿ ಕೊಟ್ಟಿದ್ದಿರಿ ? ಎಷ್ಟು ಬರುತ್ತಿದೆ ಎಂಬ ಜಿಲ್ಲಾಡಳಿತ ಮಾಹಿತಿ ಕೊಡಬೇಕು. ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಲು ಗ್ರಾಮೀಣ ಭಾಗದ ಜನರು ಹೇಗೆ ಮಾಡಬೇಕು ಅದನ್ನು ಸರಿಪಡಿಸುವಂತೆ ಆಗ್ರಹಿಸಿದರು.

ವೈದ್ಯರ ಮೇಲೆ ಹಲ್ಲೆಯಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಅವರಿಗೆ ರಕ್ಷಣೆ ನೀಡಬೇಕು. ರೆಮಡಿಸಿವರ್  ಹಂಚಿಕೆಯಲ್ಲಿ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ನಾವು ಹೇಳಿಕೆ ನೀಡಿದರೆ ರಾಜಕಾರಣ ಮಾಡಬೇಡಿ ಎನ್ನುತ್ತಾರೆ. ಜಿಲ್ಲೆಗೆ ರೆಮಡಿಸಿವರ್ ಕೊರತೆ ನಿಗಿಸುವಂತೆ ಎಂದು ಹೆಬ್ಬಾಳ್ಕರ್ ‌ಹೇಳಿದರು.

ಶಾಸಕಿ ನಿಂಬಾಳ್ಕರ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾಡಳಿತ ಆಕ್ಸಿಜನ್ ಘಟಕ ಸ್ಥಾಪನೆ ಮಾಡಿದೆ ಸಮಸ್ಯೆ ಬಗೆ ಹರಿಯುತ್ತದೆ. ಸರಕಾರದ ಬಳಿ ಆಕ್ಸಿಜನ್ ಕೇಳುವ ಅವಶ್ಯಕತೆನೇ ಇರುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

 

 


Leave a Reply