State

ಅನಗತ್ಯ ವಾಹನ ಓಡಾಟಕ್ಕೆ ಬ್ರೇಕ್ : ಪಿಲ್ಡ್‍ಗಿಳಿದ ಕಮಿಷನರ್ ಲಾಬೂರಾಮ್


ಹುಬ್ಬಳ್ಳಿ: ಕೊರೊನಾ ತಡೆಗಟ್ಟಲು ರಾಜ್ಯ ಸರಕಾರ ಸಂಪೂರ್ಣವಾಗಿ ಲಾಕ್ ಡೌನ್‍ನ ಮಾಡಿದರು ಸಹ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಓಡಾಟ ನಡಸಿರುವ ಹಿನ್ನೆಲೆ ಹು-ಧಾ ಪೆÇಲೀಸ್ ಕಮಿಷನರ್ ಲಾಬೂರಾಮ್ ಅವರು ಸ್ವತಃ ಪಿಲ್ಡ್‍ಗಿಳಿದು ಬೈಕ್ ಹಾಗೂ ಕಾರ್ ಸೀಜ್ ಮಾಡಿ ಎಚ್ಚರಿಕೆ ನೀಡಿದರು.

ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪೆÇೀಲಿಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ, ಆದ್ದರಿಂದ ಸಾರ್ವಜನಿಕರ ಆರೋಗ್ಯ ಕಾಪಾಡಲು ರಾಜ್ಯವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಜಾರಿ ಮಾಡಿ ಯಾರು ಹೋರ ಬರದಂತೆ ಮನವಿ ಮಾಡಿದರು ಸಹ ಸಾರ್ವಜನಿಕರು ವಿನಾಕಾರಣ ವಾಹನಗಳ ಓಡಾಟ ನಡೆಸಿದ್ದರು, ಸ್ವತಃ ನಗರ ಚನ್ನಮ್ಮ ವೃತ್ತದಲ್ಲಿ ಫೀಲ್ಡಿಗಿಳಿದು ವಾಹನ ತಪಾಸಣೆಗೆ ಮುಂದಾದ ಪೆÇಲೀಸ್ ಆಯುಕ್ತ ಲಾಬೂರಾಮ್ ಹಾಗೂ ಡಿಸಿಪಿ ಕೆ.ರಾಮರಾಜನ್
ಹೆಚ್ಚಿನ ವಾಹನ ಸಂಚಾರ ಅನಗತ್ಯ ಓಡಾಡುತ್ತಿದ್ದ ಸವಾರರ ತಪಾಸಣೆ ಮಾಡಿ ಹಲವಾರು ಬೈಕ್, ಕಾರ್ ಗಳನ್ನ ಸೀಜ್ ಮಾಡಿ ಎಚ್ಚರಿಕೆ ನೀಡಿದರು.


Leave a Reply