Belagavi

ಕೊರೋನಾ ರೋಗಿಗಳಿಗೆ ಔಷಧಿಯ ಕೊರತೆ ಆಗಬಾರದು : ಆನಂದ ಮಾಮನಿ


ಸವದತ್ತಿ ೧೦ : ಮಹಾ ಮಾರಿ ಕೊರೋನಾ ರೋಗವನ್ನು ತಡೆಗಟ್ಟುವಲ್ಲಿ ತಾಲೂಕಾ ಆಡಳಿತವು ಶ್ರಮವಹಿಸಿ ಸೇವೆಸಲ್ಲಿಸುತ್ತಿದೆ ಇಲ್ಲಿನ ವೈದ್ಯರೂ ಸಹ ಶ್ರಮವಹಿಸಿ ಸೇವೆಸಲ್ಲಿಸುತ್ತಿದ್ದಾರೆ ಆದರೆ ಬಿಎಸ್‌ಸಿ ನರಸಿಂಗ್ ಆದ ವೈದ್ಯರು ಇಲ್ಲಿ ಇರುವುದಿಲ್ಲ ಆದ್ದರಿಂದ ಕೊಡಲೆ ಬಿಎಸ್‌ಸಿ ನರಸಿಂಗ್ ಆದ ವೈದ್ಯರ ಕೊಡಲೇ ನೇಮಿಸಿಕೊಳ್ಳಬೇಕು.ಕೊರೋನಾ ಸೊಂಕು ರೊಗಕ್ಕೆ ಮತ್ತು ದೃಡಪಟ್ಟ ಜನರಿಗೆ ಔಷಧಿಯ ಕೊರತೆ ಆಗಬಾರದು ಎಂದು ವಿಧಾನಸಭೆ ಉಪ ಸಭಾದ್ಯಕ್ಷ ಆನಂದ ಮಾಮನಿ ಹೇಳಿದರು
ಅವರು ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಕೊವೀಡ್ ೧೯ ೨ನೇ ಅಲೆ ಸಭೆಯಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದ ಅವರು ಈಲ್ಲಿ ಈಡೀ ತಾಲೂಕಾಡಳಿತ ಮತ್ತು ತಹಶಿಲ್ದಾರ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕಾ ವೈದ್ಯಾಧಿಕಾರಿಗಳ ಜೊತೆ ನೀರಂತರವಾಗಿ ದೂರವಾಣಿ ಸಂಪರ್ಕದಲ್ಲಿ ಇದ್ದು ರೋಗಿಗಳ ಮತ್ತು ಆಸಪತ್ರೇಯಲ್ಲಿನ ಕುಂದು ಕೊರತೆಗಳನ್ನು ವಿಚಾರಿಸಿ ಅಲ್ಲಿ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಮಾಡುವೆ ಆದರೆ ಕೊವೀಡ್ ಔಷಧಿ ವಿತರಿಸುವ ಜಿಲ್ಲಾ ಅಧಿಕಾರಿ ರಘುರಾಮ ರವರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಆದರೂ ಕೊಡಾ ನಾವು ಇಲ್ಲಿ ಯಾವದೆ ರಿತಿಯ ತೊಂದರೆ ಆಗಲಾರದಂತೆ ಮುಂಜಾಗ್ರತೆ ವಹಿಸಿದ್ದೆವೆ.
ನಂತರ ಮುಖ್ಯ ಅಥಿತಿಗಳಾಗಿ ಆಗಮಿಸಿದ ಲೋಕಸಭಾಸದಸ್ಯರಾದ ಮಂಗಳಾ ಸುರೇಶ ಅಂಗಡಿಯವರು ಮಾತನಾಡಿ ರೋಗಿಗಳಿಗೆ ಉತ್ತಮವಾದ ಚೀಕಿತ್ಸೇ ನಿಡಬೇಕು ಇಲ್ಲಿನ ಸಮಸ್ಯೆಗಳು ಎನಾದರು ಇದ್ದರೆ ನಾನೂ ಕೊಡಾ ಸಹಾಯಮಾಡವದಾಗಿ ಮತ್ತು ತಾಲೂಕಿನಲ್ಲಿ ಕಟ್ಟುನಿಟ್ಟಿನಿ ಕ್ರಮಗಳನ್ನು ಅಳವಡಿಸಿ ಕೊರೊನಾ ಸೊಂಕು ರೊಗವನ್ನು ತಡೆಗಟ್ಟುವ ಪ್ರಯತ್ನವನ್ನು ಎಲ್ಲರೊ ಸೇರಿಮಾಡೊಣ ಎಂದರು
ಈ ಸಬೆಯಲ್ಲಿ ಬೈಲಹೊಂಗಲ ಉಪ ವೀಭಾಗಾಧಿಕಾರಿ ಶಶೀಧರ ಬಗಲಿ. ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ ತಾ ವೈದ್ಯಾಧಿಕಾರಿ ಢಾ ಮಹೇಶ ಚಿತ್ತರಗಿ. ಮುಖ್ಯವೈದ್ಯಾದಿಕಾರಿ ಡಾ ಮಲ್ಲನಗೌಡರ. ಸಭೇಯಲ್ಲಿ ಯರಗಟ್ಟಿ ತಹಶೀಲ್ದಾರ ಎಮ್ ಎಮ್ ಮಠದ. ಪುರಸಭೆ ಮುಕ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ. ಮುನವಳ್ಳಿ ಪುರಸಭೆ ಮುಕ್ಯಾಧಿಕಾರಿ ಎಮ್ ಎಮ್ ತಿಮ್ಮಾಣೆ ಸಿಪಿಐ ಮಂಜುನಾಥ ನಡುವಿನಮನಿ ಸೇರಿದಂತೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು


Leave a Reply