Koppal

ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸಿದ ಕೊಪ್ಪಳ ತಹಶೀಲ್ದಾರ್


ಕೊಪ್ಪಳ : ಜಿಲ್ಲೆಯ ಅಳವಂಡಿ, ಕಿನ್ನಾಳ ಹಾಗೂ ಇರಕಲ್‌ಗಡ ಗ್ರಾಮದಲ್ಲಿ ಯಾವುದೇ
ಪರವಾನಿಗೆ ಇಲ್ಲದೆ ನಕಲಿ ವೈದ್ಯರು ನಡೆಸುತ್ತಿದ್ದ ತಾಲ್ಲೂಕಿನ ಒಟ್ಟು ಹನ್ನೇರಡು
ಆಸ್ಪತ್ರೆಗಳನ್ನು ಕೊಪ್ಪಳ ತಹಶೀಲ್ದಾರ್ ಅಮರೇಶ್ ಬಿರಾದರ್, ತಾಲೂಕ ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹಾಗೂ ತಾಲೂಕ ಆರೋಗ್ಯಾಧಿಕಾರಿ
ರಾಮಾಂಜನೇಯ ಅವರ ನೇತೃತ್ವದ ಅಧಿಕಾರಿಗಳ ತಂಡ ಆಸ್ಪತ್ರೆಗಳಿಗೆ ದಿಢೀರ್ ದಾಳಿ ಮಾಡಿ
ದಾಖಲೆಗಳನ್ನು ಪರಿಶೀಲಿಸಿ ವಾರದೊಳಗೆ ಕೆ.ಪಿ.ಎಮ್.ಇ ತಂತ್ರಾಂಶದ ಮೂಲಕ ನೋಂದಣಿ
ಕೈಗೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಳವಂಡಿ ಗ್ರಾಮದಲ್ಲಿ ಐದು ಖಾಸಗಿ ವೈದ್ಯಕೀಯ ಕ್ಲಿನಿಕ್‌ಗಳು ಇದ್ದು ಇದರಲ್ಲಿ
ಸಿದ್ದೇಶ್ವರ ಕ್ಲಿನಿಕ್ ಹಾಗೂ ಗವಿಸ್ವಾಮಿ ಕ್ಲಿನಿಕ್ ಮಾತ್ರ ಕೆ.ಪಿ.ಎಮ್.ಇ.
ಕಾಯ್ದೆಯಡಿ ನೋಂದಣಿಯಾಗಿದ್ದು, ಉಳಿದಂತೆ ಎನ್.ಎಮ್. ಮುಲ್ಲಾ ಕ್ಲಿನಿಕ್ ಹಲವಾಗಲಿ
ರಸ್ತೆ ಅಳವಂಡಿ, ಸಿರಿ ಕ್ಲಿನಿಕ್ ಶಿವನಗರ ಅಳವಂಡಿ, ವೈಭವ ಕ್ಲಿನಿಕ್ ಮೇನ್ ಬಜಾರ್
ಅಳವಂಡಿ ಇವರಿಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ.
ಕಿನ್ನಾಳ ಗ್ರಾಮದಲ್ಲಿ ಒಟ್ಟು ಮೂರು ಖಾಸಗಿ ವೈದ್ಯಕೀಯ ಕ್ಲಿನಿಕ್‌ಗಳು ಇದ್ದು,
ಇದರಲ್ಲಿ ಒಂದು ಮಾತ್ರ ಕೆ.ಪಿ.ಎಮ್.ಇ ಕಾಯ್ದೆಯಡಿಯಲ್ಲಿ ನೋಂದಣಿ ಆಗಿದ್ದು, ಉಳಿದಂತೆ
ಮಂಜುನಾಥ ಕ್ಲಿನಿಕ್ ಕಿನ್ನಾಳ ಇವರಿಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಿದರು. ಉಳಿದಂತೆ
ಅಲ್ ಶಿಪಾ ಕ್ಲಿನಿಕ್ ಸರಿಯಾದ ದಾಖಲೆಗಳು ಇಲ್ಲದ ಕಾರಣ ಬಂದ ಮಾಡಿಸಲಾಯಿತು.
ಇನ್ನೂ ಇರಕಲ್‌ಗಡ ಗ್ರಾಮದಲ್ಲಿನ ಶ್ರೀ ಸಮೃದ್ದಿ ಕ್ಲಿನಿಕ್, ಶ್ರೀ ಭಗತ್‌ರಾಜ್
ಕ್ಲಿನಿಕ್, ಸಂಜೀವಿನಿ ಕ್ಲಿನಿಕ್, ವಿಶ್ವ ಡೆಂಟಲ್ ಕ್ಲಿನಿಕ್ ಹಾಗೂ ಜನರಲ್ ದವಾಖಾನೆ
ಈ ಕ್ಲಿನಿಕ್‌ಗಳು ನೋಂದಣಿಯಾಗದ ಕಾರಣ ಒಂದು ವಾರದೊಳಗೆ ಕೆ.ಪಿ.ಎಮ್.ಇ ತಂತ್ರಾಂಶದ
ಮೂಲಕ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ತಪ್ಪಿದಲ್ಲಿ ತಮ್ಮ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ತಹಶೀಲ್ದಾರ್ ಅಮರೇಶ್ ಬಿರಾದರ್ ಅವರು
ಎಚ್ಚರಿಸಿದ್ದಾರೆ. ಕಂದಾಯ ನಿರೀಕ್ಷಕ ಮೈನುದ್ದೀನ್ ಸಂಬಂಧಪಟ್ಟ ಗ್ರಾಮ
ಲೆಕ್ಕಾಧಿಕಾರಿಗಳು ಪಾಲ್ಗೊಂಡಿದ್ದರು.


Leave a Reply