Belagavi

ಬೆಳಗಾವಿ ನಗರದ ಪ್ರತಿ ವಾರ್ಡುಗಳಲ್ಲಿ ತರಕಾರಿ, ಹಣ್ಣು, ಹೂವು ಮಾರಾಟಕ್ಕೆ ವ್ಯವಸ್ಥೆ


ಬೆಳಗಾವಿ: ಪ್ರಸ್ತುತ ಕೋವಿಡ್-19ರ ನಿಮಿತ್ಯ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬೆಳಗಾವಿ ನಗರದ ಎಲ್ಲ ವಾರ್ಡ್ಗಳಲ್ಲೂ ತರಕಾರಿ/ಹಣ್ಣು/ಹೂವು ಮಾರಾಟ ಮಾಡಲು ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಿಲ್ಲಾ ಹಾಪ್ಕಾಮ್ಸ್, ರೈತ ಉತ್ಪಾದಕ ಸಂಸ್ಥೆ ಹಾಗೂ ರಫ್ತುದಾರರಿಂದ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿಯೊಂದು ವಾರ್ಡಗಳಲ್ಲಿ ಸಂಚರಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ತರಕಾರಿಗಳನ್ನು ಖರೀದಿಸಬಹುದಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಾರ್ಡವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಆಯಾ ವಾರ್ಡುಗಳಿಗೆ ತರಕಾರಿ ವಾಹನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು, ಬೆಳಗಾವಿರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಸರು ಮತ್ತು ಪದನಾಮ ಮೊಬೈಲ್ ಸಂಖ್ಯೆ ಹಂಚಿಕೆ ಮಾಡಿದ ವಾರ್ಡಗಳ ಸಂಖ್ಯೆ :

ಕಿರಣಕುಮಾರ ಉಪಳೆ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಳಗಾವಿ

9886909153

ವಾರ್ಡ ನಂ. 1-12

 

ಲಕ್ಷ್ಮಣ  ಯಡ್ರಾಂವಿ

ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಳಗಾವಿ

9980065304

ವಾರ್ಡ ನಂ. 13-24

 

ಬಸನಗೌಡ ಬಿ. ಪಾಟೀಲ

ಕಾರ್ಯದರ್ಶಿ, ಜಿಲ್ಲಾ ಹಾಪ್ಕಾಮ್ಸ್, ಬೆಳಗಾವಿ.

9480343791

ವಾರ್ಡ ನಂ. 25-36

 

ಈರಣ್ಣ ಬಟಕುರ್ಕಿ

ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಳಗಾವಿ

9880085009

ವಾರ್ಡ ನಂ. 37-48

 

ರವಿ ಭಜಂತ್ರಿ

ಎ.ಪಿ.ಎಮ್.ಸಿ., ಬೆಳಗಾವಿ

9972616609

ವಾರ್ಡ ನಂ. 49-58


Leave a Reply