Belagavi

ಬಿಜೆಪಿ ಕಾರ್ಯಕರ್ತರು ಕರೋನ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ: ಸಂಜಯ ಪಾಟೀಲ


ಬೆಳಗಾವಿ: ಪ್ರಪಂಚದಲ್ಲಿ ಯಾರು ಊಹಿಸದ ರೀತಿಯಲ್ಲಿ ಮಹಾಮಾರಿ ಕರೋನಾ ಎರಡನೆಯ ಅಲೆ ಇಂದು ಭಾರತದಲ್ಲಿ ಸೃಷ್ಟಿಸಿರುವ ಆವಂತರವನ್ನು  ಮೆಟ್ಟಿ ನಿಲ್ಲುವ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕರೋನ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಸೋಮವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕರೋನಾ ಮಹಾಮಾರಿಯ ಎರಡನೇ ಅಲೆಯಲ್ಲಿ ಎದೆಗುಂದದೆ ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೇವಾ ಹಿ ಸಂಘಟನೆಯ ಅಡಿಯಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು  ಆಹಾರ ಕಿಟ್ಟ ವಿತರಣೆ, ಆಕ್ಸಿಜನ್ ಸಿಲಿಂಡರ್ ಮಾಹಿತಿ, ಕೋವಿಡ್ ರೋಗಿಗಳಿಗೆ ಬೆಡ್ ಗಳ ವ್ಯವಸ್ಥೆ ,ರಕ್ತದಾನ ವ್ಯಾಕ್ಸಿನ್ ಮಾಹಿತಿ ಅಂಬುಲೆನ್ಸ್ ವ್ಯವಸ್ಥೆ, ತೀರಿಕೊಂಡ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸಹಾಯ ಹೀಗೆ 13 ವಿಭಾಗಗಳಲ್ಲಿ ನೂರಾರು ಕಾರ್ಯಕರ್ತರು ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

.ವೈದ್ಯಕೀಯ ಪ್ರಕೋಷ್ಟಾದ ಸಂಚಾಲಕ ಡಾ.ಗುರುಪ್ರಸಾದ ಕೋತಿನ ಅವರ ನೇತೃತ್ವದಲ್ಲಿ ಮನೆಯಲ್ಲಿ ಐಸೊಲೆಶನ್ ಆದ ಕೊವಿಡ್ ಸೊಂಕಿತರಿಗೆ ವೈದ್ಯಕೀಯ ಮಾರ್ಗದರ್ಶನ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ನಿತಿನ್ ಚೌಗುಲೆ ಹಾಗೂ ಕಾರ್ಯಾಲಯ ಕಾರ್ಯದರ್ಶಿ ವೀರಭದ್ರ ಪೂಜಾರ್ ನೇತೃತ್ವದಲ್ಲಿ ಜಿಲ್ಲೆಯ ಕೋವಿಡ್ ಆಸ್ಪತ್ರೆ, ಕೊವಿಡ್ ಪರೀಕ್ಷಾ ಕೇಂದ್ರ ಬೆಡ್ ಗಳ ಹಾಗೂ ಆಕ್ಸಿಜನ್ ಮಾಹಿತಿಯನ್ನು ಅವಶ್ಯಕ ರೋಗಿಗಳಿಗೆ ನೀಡುತ್ತಿದ್ದಾರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಮಹೇಶ್ ಮೋಹಿತೆ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ್ ಮಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ ಉಸ್ತುವಾರಿಯಲ್ಲಿ ಕೋವಿಡ್ ರೋಗಿಗಳಿಗೆ ಸಂಬಂಧಿಸಿದ ಸಹಕಾರ ನೀಡುತ್ತಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯದಲ್ಲಿ 34 ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು ಅದರಲ್ಲಿ ಜಿಲ್ಲೆಗೆ 4 ಘಟಕಗಳ ಸ್ಥಾಪನೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಮನವಿ ಮಾಡಲಾಗಿದ್ದು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಇಲ್ಲಿಯವರೆಗೆ ಜಿಲ್ಲೆಗೆ 16 ಕೆಎಲ್ ಆಕ್ಸಿಜನ್ ಬದಲಾಗಿ 24ಕೆಎಲ್ ಆಕ್ಸಿಜನ್ ಹಾಗೂ ವ್ಯಾಕ್ಸಿನ್ ಮತ್ತು ರೆಮ್ ಡಿಸಿವರ್ ಇಂಜೆಕ್ಷನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿವೆ. ನೂತನ‌ ಸಂಸದರಾ ಮಂಗಲಾ ಅಂಗಡಿಯವರು ಪ್ರತಿ ದಿನ ಪ್ರತಿಯೊಂದು ತಾಲೂಕಿಗೆ ತೆರಳಿ ಕೊವಿಡ್ ಬಗ್ಗೆ ಅಧಿಕಾರಿಗಳು ಕೈಗೊಂಡ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಎಡಬಿಡದೆ ಸಭೆಗಳನ್ನು ತಗೆದುಕೊಂಡು ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಗಮನ ಹರಿಸುತ್ತಿದ್ದಾರೆ.

ಕೋವಿಡ್ ಎರಡನೆ ಅಲ್ಲೆಯಲ್ಲಿ ಜೀವದ ಹಂಗು ತೊರೆದು ನೂರಾರು ಬಿಜೆಪಿ ಕಾರ್ಯಕರ್ತರು ಸೇವಾ ಹಿ ಸಂಘಟನಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ವಿರೋಧಿಗಳ ಕಣ್ಣಿಗೆ ಇವು ಯಾವವು ಕಾಣಿಸುತ್ತಿಲ್ಲ ಕೇವಲ ಬಿಜೆಪಿಯನ್ನು ಹಾಗೂ ಬಿಜೆಪಿ ಸರಕಾರವನ್ನು ತೆಗಳುವ ಕೆಲಸಗಳಲ್ಲಿ  ನಿರತರಾಗಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ  ರಾಜಕಾರಣ ಮಾಡುವದು ಸರಿಯಲ್ಲ. ಯಾವ ವಿರೊಧಿಗಳ ಹೇಳಿಕೆಗಳಿಗೂ ಪ್ರತ್ಯುತ್ತರ ನೀಡದೆ ಸಂಕಷ್ಟದಲ್ಲಿರುವ ಜಿಲ್ಲೆಯ ಜನತೆಯ ಸೇವೆಯನ್ನು ಸರಕಾರದೊಂದಿಗೆ ಪಕ್ಷದ ಕಾರ್ಯಕರ್ತರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವತ್ತ ಗಮನ ಹರಿಸುವುದಾಗಿ ಹೇಳಿದರು.


Leave a Reply