Belagavi

ತ್ರಿವಿಧ ದಾಸೋಹ ಮೂರ್ತಿ ಲಿಂ. ಶ್ರೀ ಸಿದ್ದರಾಯಜ್ಜನವರ 4ನೇ ಪೂಣ್ಯಾರಾಧನೆ ಮತ್ತು ಜಾತ್ರಾ ಮಹೋತ್ಸವ ರದ್ದು


ಕಟಕೋಳ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಜೀವಾಪೂರ ರಸ್ತೆಯಲ್ಲಿ ಈ ಗುರು ಶ್ರೀವಿ ದಾಸೋಹ ಮೂರ್ತಿ ಲಿಂ. ಶ್ರೀ ಸಿದ್ದರಾಯಜ್ಜನವರ 4 ನೇ ಪೂಣ್ಯಾರಾಧನೆ ಕಾರ್ಯಕ್ರಮವು ದಿನಾಂಕ 11-0-2021 ರಂದು ಜರುಗಬೇಕಿತ್ತು ಆದರೆ ಕರೋನಾ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ, ಸರಕಾರದ ನಿಬಂಧನೆಗಳ ಅನುಸಾರವಾಗಿ ಕಾರ್ಯಕ್ರಮವನ್ನು ರದ್ದು ಮಾಡಿ ಅವರ ಸಂಕಲ್ಪದಂತ ಆಹಾರ ಸಾಮಗ್ರಿಗಳನ್ನು ನಿಮ್ಮ ಶಕ್ತಾನುಸಾರವಾಗಿ ಬಡವರಿಗೆ ನಿರ್ಗತಿಕರಿಗೆ ನೀಡಿರಿ ಎಂದು ಶ್ರೀ ಅಭಿವನ ಸಿದ್ದರಾಯಜ್ಜನವರು ತಿಳಿಸಿದ್ದಾರೆ.

ಭಕ್ತರಿಗೆ ಮನೆಯಲ್ಲಿಯೇ ಇದ್ದು ಶ್ರೀ ಸಿದ್ದರಾಯಜ್ಜನವರನ್ನು ನೆನೆಯಿರಿ, ಅನಾವಶ್ಯಕ ಹೊರಗೆ ಹೊಗದಿರಿ, ಮಾಕ್ಸ್, ಬಳಸಿ, ನಮ್ಮ ದೇಶಿಯ ಆಹಾರ ಸೇವಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಸರಕಾರದ ನಿಯಮ ಪಾಲಿಸಿ ನಿಮ್ಮ ರಕ್ಷಣೆಗಾಗಿ ಸಿದ್ದಯರವರಿದ್ದಾರೆ ಸಮಾಜದಲ್ಲಿಯ ಬಡ ನಿರ್ಗತಿಕರಿಗೆ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯಮಾಡಿರಿ ಎಂದು ಶ್ರೀ ಅಭಿನವ ಸಿದ್ದರಾಯಜ್ಜನವರು ಹೇಳಿದರು.

ಶ್ರೀಮಠದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಇರುವುದಿಲ್ಲ ಆದ್ದರಿಂದ ಭಕ್ತಾಧಿಗಳು ಕಟಕೋಳದ ಶ್ರೀಮಠಕ್ಕೆ ಬರದೇ ಮಂಗಳವಾರ ಮೇ 11 ರಂದು ಸಂಜೆ 5:30 ರ ನಂತರ ತಮ್ಮ ತಮ್ಮ ಮನೆಯಿಂದಲೇ ಶ್ರೀಗಳ ಪುಣ್ಯಾರಾಧನೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿರಿ ಎಂದು ತಿಳಿಸಿದರು.

ನಿಮ್ಮ ಶಕ್ತಾನುಸಾರ ನಿರ್ಗತಿಕರಿಗೆ, ಬಡವರಿಗೆ ಅನ್ನದಾನ ಮಾಡಿ , ಅವಶ್ಯಕ ವಸ್ತುಗಳನ್ನು ನೀಡಿ ಶ್ರೀಗಳ ಆರ್ಶಿವಾದಕ್ಕೆ ಪಾತ್ರರಾಗಬೇಕೆಂದು ಕೋರುತ್ತೇವೆ. ಈ ರೋಗವು ಬಹಳದಿನಗಳ ವರೆಗೆ ಇರುವುದಿಲ್ಲ. ಆದರೆ ಆಧುನಿಕತ, ಔದ್ಯೋಗಿಕತೆ, ತಾಂತ್ರಿಕತೆಯಲ್ಲಿ

ಯಂತ್ರಗಳಾಗಿದ್ದ ಮಾನವರಿಗೆ ಸಂಬಂಧಗಳ ಅರಿವು ಮೂಡಿಸಲು ಬಂದಿದೆ. ಇನ್ನಾದರೂ ದುಷ್ಟಚಟಗಳಿಗೆ ಬಲಿಯಾಗದೇ, ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗದೇ ಮನೆಯಲ್ಲಿಯೇ ಪ್ರಸಾದ ಸೇವಿಸಿ ಗುರು ನಾಮಸ್ಮರಣೆಯಿಂದ ಈ ರೋಗವನ್ನು ನಾಶ ಮಾಡಬಹುದೆಂಬುದನ್ನು ತೋರಿಸಲು ಬಂದಿದೆ ಎಲ್ಲರೂ ಸರಕಾರದ ನಿಯಮ ಪಾಲಿಸಿ ಕರೊನಾ ಓಡಿಸಿ ಎಂದು ಶ್ರೀಗಳು ತಿಳಿಸಿದ್ದಾರೆ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply